ಬಸವಕಲ್ಯಾಣ: ‘ವಾತಡೆ ಫೌಂಡೇಶನ್‌ನ ವತಿಯಿಂದ ಫೆಬ್ರುವರಿ 26 ರಂದು ಸರ್ವ ಧರ್ಮ ಹಾಗೂ ಎಲ್ಲ ಸಮುದಾಯಗಳ ಸಾಮೂಹಿಕ ವಿವಾಹ ಮತ್ತು ಮಹಿಳೆಯರ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ’ ಎಂದು ಫೌಂಡೇಶನ್‌ನ ಅಧ್ಯಕ್ಷ ಪ್ರದೀಪ ವಾತಡೆ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 11ಕ್ಕೆ ನಗರದ ಬಂದವರ ಓಣಿ ಬಳಿಯ ಎಂ.ಬಿ.ಪಾಟೀಲ ಬಡಾವಣೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. 10ಕ್ಕೂ ಹೆಚ್ಚು ಜೋಡಿಗಳು ನೋಂದಣಿ ಮಾಡಿಕೊಂಡಿವೆ. 5000 ಮಹಿಳೆಯರಿಗೆ ಉಡಿ ತುಂಬಲಾಗುತ್ತದೆ. ಪ್ರತಿವರ್ಷ ಇತರೆಡೆ ಇಂಥ ಕಾರ್ಯಕ್ರಮ ನಡೆಯುತ್ತಿತ್ತು. ಈ ಬಾರಿ ಇಲ್ಲಿ ಹಮ್ಮಿಕೊಳ್ಳಲಾಗಿದೆ. ವಿವಾಹ ನೋಂದಣಿಗೆ ಇನ್ನೂ ಕಾಲಾವಕಾಶ ಇದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.