ADVERTISEMENT

ಪುರಸಭೆ ಸಾಮಾನ್ಯ ಸಭೆ: ಎಂಜಿನಿಯರ್‌ ವಿರುದ್ಧ ಕ್ರಮಕ್ಕೆ ಶಿಫಾರಸು

ಸದಸ್ಯರ ಆಕ್ರೋಶ, ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಮೇ 2022, 2:54 IST
Last Updated 7 ಮೇ 2022, 2:54 IST
ಹುಮನಾಬಾದ್ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಕಸ್ತೂರಬಾಯಿ ಪರಸನೋರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯ ವೀರೇಶ್ ಸಿಗಿ ಮಾತನಾಡಿದರು
ಹುಮನಾಬಾದ್ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಕಸ್ತೂರಬಾಯಿ ಪರಸನೋರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯ ವೀರೇಶ್ ಸಿಗಿ ಮಾತನಾಡಿದರು   

ಹುಮನಾಬಾದ್: ಇಲ್ಲಿನ ಪುರಸಭೆ ಕಚೇರಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಗೆ ಪರಿಸರ ಎಂಜಿನಿಯರ್ ಗೈರಾಗಿದ್ದರು. ಇದನ್ನು ಖಂಡಿಸಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪರಿಸರ ಎಂಜಿನಿಯರ್‌ ನಿಯಮಿತವಾಗಿ ಸಭೆಗಳಿಗೆ ಬಾರದಿರುವುದರ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ, ಕ್ರಮಕ್ಕೆ ಶಿಫಾರಸು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

‘‌ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡಬೇಕು. ಸಿಬ್ಬಂದಿ ಕೊರತೆ ನೀಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಸಭೆಯಲ್ಲಿ ಸದಸ್ಯರು ತೀರ್ಮಾನಿಸಿದರು.

ADVERTISEMENT

ಒಂದು ವೇಳೆ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ತಕ್ಷಣವೇ ಸ್ಪಂದಿಸಲಾಗುವುದು ಎಂದು ಮುಖ್ಯಾಧಿಕಾರಿ ಚಾಂದ ಪಟೇಲ್ ತಿಳಿಸಿದರು.

2022–23ನೇ ಸಾಲಿನ 15ನೇ ಹಣಕಾಸು ಯೋಜನೆಯ ₹2.15 ಕೋಟಿ ಹಾಗೂ ಎಸ್‍ಎಫ್‍ಸಿ ಯೋಜನೆಯ ₹86 ಲಕ್ಷಕ್ಕೆ ಕ್ರಿಯಾ ಯೋಜನೆ ತಯಾರಿಕೆಗೆ ಸದಸ್ಯರು ಸರ್ವಾನುಮತದಿಂದ ಸಮ್ಮತಿ ನೀಡಿದರು. ಯುಜಿಡಿ ಕಾಮಗಾರಿ ಅವ್ಯವಹಾರದ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು.

ಸದಸ್ಯರಾದ ಸುನೀಲ ಪಾಟೀಲ, ರಮೇಶ ಕಲ್ಲೂರ, ಅಫ್ಸರ್ ಮಿಯ್ಯಾ, ವೀರೇಶ್ ಸಿಗಿ, ಮಹೇಶ ಪಾಟೀಲ, ಗೋರೆಮಿಯಾ, ಅನೀಲ ಪಲ್ಲೇರಿ, ಎಸ್.ಎ.ಬಾಶೀದ, ಸವೀತಾ ಸೊಂಡೆ, ನೀತು ಶರ್ಮಾ, ರಾಜರೆಡ್ಡಿ, ವಿಜಯಕುಮಾರ ದುರ್ಗಾದ, ಅಮರನಾಥ ದುಮ್ಮನಸೂರೆ, ಪಾರ್ವತಿ ಶೇರಿಕಾರ, ರೇಷ್ಮಾ ಶ್ರೀಧರ, ಗುಜ್ಜಮ್ಮಾ ನಾಗರೆಡ್ಡಿ, ವಿಜಯಕುಮಾರ ಬಸಪಳ್ಳಿ, ಮಾಲಾನ್‍ಬೀ, ಶರೀಫಾ ಸುಲ್ತಾನಾ ಹಾಗೂ ಬೀಪಾಶಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.