ADVERTISEMENT

ಕನಿಷ್ಠ ಬೆಂಬಲ ಬೆಲೆ ಘೋಷಣೆಯಿಂದ ಅನುಕೂಲ: ಮಾಜಿ ಸಚಿವ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:30 IST
Last Updated 22 ಜೂನ್ 2024, 15:30 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್: ‘ಕೇಂದ್ರ ಸರ್ಕಾರ 2024-25ನೇ ಸಾಲಿನಲ್ಲಿ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಘೋಷಣೆ ಮಾಡಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ’ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಖಾರಿಫ್ ಮಾರುಕಟ್ಟೆಯ ಎಂಎಸ್‌ಪಿ ಹೆಚ್ಚಿಸಿದ್ದು, ನಮ್ಮ ರಾಜ್ಯದ ರೈತರಿಗೂ ಇದರ ಲಾಭ ಸಿಗಲಿದೆ ಎಂದಿದ್ದಾರೆ.

ನಮ್ಮ ಭಾಗದಲ್ಲಿ ಹೆಚ್ಚು ಬೆಳೆಯುವ ತೊಗರಿ ಬೆಳೆಗೆ ಕ್ವಿಂಟಲ್‌ಗೆ ₹550 ಬೆಲೆ ಹೆಚ್ಚಿಸಿ ₹7,550 ನಿಗದಿ ಮಾಡಲಾಗಿದೆ. ಹೆಸರು ಬೆಳೆಗೆ ₹124 ಹೆಚ್ಚಿಸಿ ₹8,282 ನಿಗದಿ ಮಾಡಲಾಗಿದೆ. ಉದ್ದಿಗೆ ₹7,400 ಹಾಗೂ ಸೂರ್ಯಕಾಂತಿ ₹7,280 ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪಿಎಂ ಕಿಸಾನ್ ಸಮ್ಮಾನ ಯೋಜನೆಯಡಿ 17ನೇ ಕಂತಿನ ಬೀದರ್ ಲೋಕಸಭಾ ಕ್ಷೇತ್ರದ 2,20,000 ಸಾವಿರ ರೈತರ ಖಾತೆಗೆ ₹44 ಕೋಟಿ ಪ್ರೋತ್ಸಾಹ ಧನ ಜಮಾ ಆಗಿದೆ. 2023-24ನೇ ಸಾಲಿನ ಬೆಳೆ ವಿಮೆಯಲ್ಲೂ ಜಿಲ್ಲೆಯ 1,06,923 ರೈತರಿಗೆ ₹48.30 ಕೋಟಿ ಪರಿಹಾರ ಬಂದಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.