ಹುಮನಾಬಾದ್: ರಾಜ್ಯ ವಿಧಾನಸಭೆಗೆ ಹುಮನಾಬಾದ್ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿರುವ ರಾಜಶೇಖರ ಪಾಟೀಲ ಕೋಟ್ಯಧಿಪತಿಯಾದರೂ ಲಕ್ಷಾಂತರ ಸಾಲ ಮಾಡಿಕೊಂಡಿದ್ದಾರೆ.
ಗೌಡರು ₹ 5.70 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೂ ₹36.42ಲಕ್ಷ ಸಾಲ ಪಡೆದಿದ್ದಾರೆ. ಅವರ ಬಳಿ ₹ 6 ಲಕ್ಷ ಮಾತ್ರ ನಗದು ಇದೆ. ₹ 14.5ಲಕ್ಷ ಮೌಲ್ಯದ 20ಗ್ರಾಂ ಚಿನ್ನ ಹಾಗೂ ₹ 81.4ಸಾವಿರ ಮೌಲ್ಯದ ಬೆಳ್ಳಿಯ ಆಭರಣ ಹೊಂದಿದ್ದಾರೆ.
ತಮ್ಮ ಬಳಿ ₹ 6 ಲಕ್ಷ ಇಟ್ಟುಕೊಂಡಿದ್ದಾರೆ. ಪಿಕೆಜಿಬಿ, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆಗಳು ಇವೆ. ₹ 50,250 ಮೌಲ್ಯದ ಡಿಸಿಸಿ ಬ್ಯಾಂಕ್ ಷೇರು ಹೊಂದಿದ್ದಾರೆ. ₹ 28 ಲಕ್ಷ ಬೆಲೆಯ ಇನ್ನೋವಾ ಕಾರು ಹಾಗೂ ಎರಡು ಟಿಪ್ಪರ್‌ಗಳು ಇವೆ.
ಪತ್ನಿ ಪ್ರೇಮಾ ಪಾಟೀಲ ಬಳಿ ₹ 17.4ಲಕ್ಷ ಮೌಲ್ಯದ 300 ಗ್ರಾ. ಚಿನ್ನ ಹಾಗೂ ₹ 1.62 ಲಕ್ಷ ಮೌಲ್ಯದ2 ಕೆ.ಜಿ ಬೆಳ್ಳಿ ಆಭರಣಗಳು ಇವೆ. ಸ್ಥಿರಾಸ್ತಿ ಹಾಗೂ ಚರಾಸ್ತಿ ಒಟ್ಟು ₹ 4.96 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ.
ಪ್ರೇಮಾ ತಮ್ಮ ಬಳಿ ₹ 3.80 ಲಕ್ಷ ಇಟ್ಟುಕೊಂಡಿದ್ದಾರೆ. ಹುಮನಾಬಾದ್‌ನ ಪಿಕೆಜಿಬಿ, ಡಿಸಿಸಿ ಬ್ಯಾಂಕ್, ಕೆನರಾ ಬ್ಯಾಂಕ್, ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ರಾಜರಾಜೇಶ್ವರಿ ಸಹಕಾರ ಸೌಹಾರ್ದದಲ್ಲಿ ₹ 5,20 ಲಕ್ಷ ಮೌಲ್ಯದ ಷೇರು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.