ADVERTISEMENT

8ರಿಂದ ರಾಷ್ಟ್ರಮಟ್ಟದ ಚೆಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 14:45 IST
Last Updated 5 ಫೆಬ್ರುವರಿ 2024, 14:45 IST

ಹುಮನಾಬಾದ್ (ಬೀದರ್‌ ಜಿಲ್ಲೆ): ಮಾಣಿಕ್ ಪ್ರಭು ಅಂಧ ಮಕ್ಕಳ ವಸತಿ ಶಾಲೆಯ ಬೆಳ್ಳಿ ಮಹೋತ್ಸವ ಅಂಗವಾಗಿ ಫೆ. 8ರಿಂದ 11ರವರೆಗೆ ರಾಷ್ಟ್ರಮಟ್ಟದ ಚೆಸ್‌ ಟೂರ್ನಿಯನ್ನು ತಾಲ್ಲೂಕಿನ ಮಾಣಿಕ್ ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥಾನದ ಅಧ್ಯಕ್ಷ ಆನಂದರಾಜ್ ಮಾಣಿಕ್ ಪ್ರಭು ತಿಳಿಸಿದರು.

ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆಯ 10 ವಿದ್ಯಾರ್ಥಿಗಳು, ರಾಜ್ಯದ ವಿವಿಧ ಜಿಲ್ಲೆಗಳ 50 ಜನರು, ಹೊರ ರಾಜ್ಯಗಳ 210 ಸ್ಪರ್ಧಿಗಳು ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

₹15 ಸಾವಿರ ನಗದು ಮೊದಲ ಬಹುಮಾನ, ₹10 ಸಾವಿರ ದ್ವಿತೀಯ ಹಾಗೂ ₹8 ಸಾವಿರ ತೃತೀಯ ಬಹುಮಾನ ನೀಡಲಾಗುವುದು. ನಾಲ್ಕನೇ ಸ್ಥಾನ ಪಡೆದವರಿಗೆ ₹7 ಸಾವಿರ, ಐದನೇ ಸ್ಥಾನಕ್ಕೆ ₹6 ಸಾವಿರ, ಆರನೇ ಸ್ಥಾನಕ್ಕೆ ₹5 ಸಾವಿರ, ಏಳನೇ ಸ್ಥಾನಕ್ಕೆ ₹4 ಸಾವಿರ, ಎಂಟನೇ ಸ್ಥಾನಕ್ಕೆ ₹3 ಸಾವಿರ, ಒಂಬತ್ತರಿಂದ 13ನೇ ಸ್ಥಾನ ಪಡೆದವರಿಗೆ ತಲಾ ₹2 ಸಾವಿರ, 14ರಿಂದ 25ನೇ ಸ್ಥಾನ ಪಡೆದವರಿಗೆ ತಲಾ ₹1 ಸಾವಿರ ನಗದು ವಿತರಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.