ADVERTISEMENT

‘ನವರಾತ್ರಿ: ಪ್ರಕೃತಿ ಮಾತೆ ಆರಾಧಿಸುವ ಉತ್ಸವ’

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಸದ ಸಾಗರ ಖಂಡ್ರೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 16:14 IST
Last Updated 14 ಅಕ್ಟೋಬರ್ 2024, 16:14 IST
ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ 77ನೇ ಭವಾನಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು
ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ 77ನೇ ಭವಾನಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು   

ಹುಲಸೂರ: ‘ನವರಾತ್ರಿಯು ಪ್ರಕೃತಿ ಮಾತೆಯನ್ನು ಆರಾಧಿಸುವ ಉತ್ಸವವಾಗಿದೆ. ಭವಾನಿ ಮಾತೆ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ’ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.

ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ 77ನೇ ಭವಾನಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾತ್ರೆ, ಧಾರ್ಮಿಕ ಕಾರ್ಯದ ಜತೆಗೆ ಸಾಂಸ್ಕೃತಿಕ ಮೆರುಗು ಹೆಚ್ಚಿಸಿ ಜ್ಞಾನದ ಸಂಪತ್ತು ವೃದ್ಧಿಸುತ್ತಿದೆ. ಉತ್ಸವಗಳು ಬರಿಯ ಹಬ್ಬವಾಗಿರದೆ ಸಮರ್ಪಣಾ ಮನೋಭಾವ, ಹೊಸ ಚಿಂತನೆಗಳಿಗೆ ವೇದಿಕೆ ಕಲ್ಪಿಸುತ್ತವೆ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ಶಿರಡಿ ಸಾಯಿಬಾಬಾ ನಾಟ್ಯ ಸಂಘದಿಂದ ‘ತಾಯಿಯ ನೆರಳು’ ಎಂಬ ಸಾಮಾಜಿಕ ನಾಟಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರುನಾಬಾಯಿ ಪರೆಪ್ಪಾ, ಪಪ್ಪು ಉದಾನೆ, ಅರುಣ ಮಹಾಜನ, ಸೂರ್ಯಕಾಂತ ಚಲ್ಲಾಬಟ್ಟೆ, ಪ್ರಕಾಶ್ ಮೆಂಡೋಲೆ, ಅನಿಲ ಪೆರೆಪ್ಪಾ, ಶಾಲಿವಾನ ಸತ್ತಾನೆ, ರಾಮಲಿಂಗ ಸಾಗಾವೇ, ಮಹದೇವ ಮಹಾಜನ, ಜಿಯಾವುದ್ದಿನ, ಶುಶಾಂತ, ಗ್ರಾಮಸ್ಥರು ಉಪಸ್ಥಿತರಿದ್ದರು.

ಬಸವರಾಜ ಗುಂಗೇ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.