ADVERTISEMENT

ನೌಕಾಪಡೆ–ಗುರುನಾನಕ್‌ ಸಂಸ್ಥೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 16:19 IST
Last Updated 4 ಏಪ್ರಿಲ್ 2024, 16:19 IST
ಗುರುನಾನಕ್‌ ಶಿಕ್ಷಣ ಸಮೂಹ ಸಂಸ್ಥೆ ಹಾಗೂ ನೌಕಾಪಡೆ ನಡುವೆ ನವದೆಹಲಿಯಲ್ಲಿ ಬುಧವಾರ ಒಪ್ಪಂದಕ್ಕೆ ಸಹಿ ಮಾಡಿದ ಕಡತಗಳನ್ನು ಪ್ರದರ್ಶಿಸಲಾಯಿತು
ಗುರುನಾನಕ್‌ ಶಿಕ್ಷಣ ಸಮೂಹ ಸಂಸ್ಥೆ ಹಾಗೂ ನೌಕಾಪಡೆ ನಡುವೆ ನವದೆಹಲಿಯಲ್ಲಿ ಬುಧವಾರ ಒಪ್ಪಂದಕ್ಕೆ ಸಹಿ ಮಾಡಿದ ಕಡತಗಳನ್ನು ಪ್ರದರ್ಶಿಸಲಾಯಿತು   

ಬೀದರ್‌: ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತೀಯ ನೌಕಾ ಪಡೆ ಹಾಗೂ ನಗರದ ಗುರುನಾನಕ ಗ್ರುಪ್‌ ಆಫ್‌ ಇನ್‌ಸ್ಟಿಟ್ಯೂಶನ್ಸ್‌ ನಡುವೆ ನವದೆಹಲಿಯಲ್ಲಿ ಬುಧವಾರ ಒಪ್ಪಂದ ಏರ್ಪಟ್ಟಿತು.

ಗುರುನಾನಕ ಸಂಸ್ಥೆಯ ಅಧ್ಯಕ್ಷ ಎಸ್.ಬಲಬೀರ್‌ ಸಿಂಗ್‌ ಮತ್ತು ನೌಕಾಪಡೆಯ ನಿರ್ದೇಶಕ ಕಮೋಡೋರ್ ಜಿ.ರಾಮಬಾಬು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿ, ಕಡತಗಳನ್ನು ವಿನಿಮಯ ಮಾಡಿಕೊಂಡರು.

ಗುರುನಾನಕ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ, ಗುರುನಾನಕ್‌ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ನೌಕಾಪಡೆಯವರು ತರಬೇತಿ ಕೊಡುವರು. ವಿದ್ಯಾರ್ಥಿಗಳು ನೌಕಾಪಡೆ ಸೇರಲು ಅನುಕೂಲವಾಗಲಿದೆ’ ಎಂದರು.

ADVERTISEMENT

ನೌಕಾಪಡೆಯ ಸಿಎಂಡಿ ಕಲಾ ಹರಿಕುಮಾರ, ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.