ಬೀದರ್: ನವದೆಹಲಿಯ ಎನ್.ಸಿ.ಸಿ.ನಿರ್ದೇಶನಾಲಯ ಹಾಗೂ ಕಲಬುರ್ಗಿಯ 32ನೇ ಕರ್ನಾಟಕ ಬಟಾಲಿಯನ್
ವತಿಯಿಂದ ಎನ್.ಸಿ.ಸಿ. ವಾರ್ಷಿಕ ತರಬೇತಿ ಶಿಬಿರ ಇಲ್ಲಿಯ ಬಿ.ವಿ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಆರಂಭವಾಗಿದ್ದು, ಜನವರಿ 22ರ ವರೆಗೆ ನಡೆಯಲಿದೆ.
ಮೇಜರ್ ಪಿ.ವಿಠ್ಠಲ ರಡ್ಡಿ, ಸಿ.ಟಿ.ಒ. ಅಶ್ವಿನ್ ಚೌಹಾಣ, ಸುಬೇದಾರ ಪಲ್ವಿಂದರ್‌ಸಿಂಗ್ ಹಾಗೂ ಹವಾಲ್ದಾರ್ ರವಿ ಹಾಗೂ ಎನ್.ಸಿ.ಸಿ. ಕೆಡೆಟ್‌ಗಳು ಜಂಟಿಯಾಗಿ ಶಿಬಿರಕ್ಕೆ ಚಾಲನೆ ನೀಡಿದರು. ಎನ್.ಸಿ.ಸಿ. ಕಲಬುರ್ಗಿಯ ಕಮಾಡಿಂಗ್ ಅಧಿಕಾರಿ ಕರ್ನಲ್ ಎಸ್.ಕೆ. ತಿವಾರಿ ನಿರ್ದೇಶನದಲ್ಲಿ ಶಿಬಿರ ನಡೆಯುತ್ತಿದೆ.
ಶಿಬಿರದಲ್ಲಿ ಬೀದರ್‌ನ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯ, ಕರ್ನಾಟಕ ಪದವಿ ಮಹಾವಿದ್ಯಾಲಯ, ಭಾಲ್ಕಿಯ ಸಿ.ಬಿ. ಪದವಿ ಮಹಾವಿದ್ಯಾಲಯ, ಶಿವಾಜಿ ಪದವಿ ಮಹಾವಿದ್ಯಾಲಯ, ಬಸವಕಲ್ಯಾಣದ ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಮಹಾವಿದ್ಯಾಲಯ, ಮಾಣಿಕನಗರ ಪದವಿ ಪೂರ್ವ ಮಹಾವಿದ್ಯಾಲಯದ 308 ಎನ್‌ಸಿಸಿ ಕೆಡೆಟ್‌ಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.