ADVERTISEMENT

ಹುಮನಾಬಾದ್ | ಹೊಸ ಕೊಳವೆ ಬಾವಿ: ನೀರಿನ ಘಟಕ ದುರಸ್ತಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:22 IST
Last Updated 6 ಜುಲೈ 2024, 16:22 IST
ಹುಮನಾಬಾದ್ ತಾಲ್ಲೂಕಿನ ಕಲ್ಲೂರ್ ತಾಂಡಾದಲ್ಲಿ ಹೊಸ ಕೊಳವೆ ಬಾವಿ ಕೊರೆಯುತ್ತಿರುವುದು
ಹುಮನಾಬಾದ್ ತಾಲ್ಲೂಕಿನ ಕಲ್ಲೂರ್ ತಾಂಡಾದಲ್ಲಿ ಹೊಸ ಕೊಳವೆ ಬಾವಿ ಕೊರೆಯುತ್ತಿರುವುದು   

ಹುಮನಾಬಾದ್: ಬಾವಿಯ ನೀರು ಕಲುಷಿತಗೊಂಡ ಕಾರಣ ತಾಲ್ಲೂಕಿನ ಕಲ್ಲೂರ್ ತಾಂಡದ ಗ್ರಾಮಸ್ಥರು ಕಳೆದ ಒಂದು ವಾರದಿಂದ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿತ್ತು.

ಈ ಕುರಿತು ಪ್ರಜಾವಾಣಿಯು ಜುಲೈ 6ರ ಸಂಚಿಕೆಯಲ್ಲಿ ‘ಶುದ್ಧ ನೀರಿಗಾಗಿ ಪರದಾಟ’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿತ್ತು. ‘ಪ್ರಕಟಗೊಂಡ ವರದಿಗೆ ಎಚ್ಚೆತ್ತುಕೊಂಡು ಅಧಿಕಾರಿಗಳು ಗ್ರಾಮದಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ, ಶುದ್ಧ ನೀರಿನ ಘಟಕ ದುರಸ್ತಿ ಮಾಡಿಸಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ಪವಾರ್ ತಿಳಿಸಿದ್ದಾರೆ.

‘ಪ್ರಜಾವಾಣಿ’ ವರದಿಯಿಂದ ಗ್ರಾಮದಲ್ಲಿ ಬೋರ್‌ವೆಲ್‌ ಹಾಕಿರುವುದು ಸಂತಸ ತಂದಿದೆ. ಹೀಗಾಗಿ ‘ಪ್ರಜಾವಾಣಿ’, ಶಾಸಕ ಅಧಿಕಾರಿಗಳಿಗೆ ಧನ್ಯವಾದಗಳು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.