ADVERTISEMENT

ಅಲೈನ್ಸ್ ಕ್ಲಬ್ ಇಂಟರ್‌ನ್ಯಾಷನಲ್‍ಗೆ ಪದಾಧಿಕಾರಿಗಳ ಆಯ್ಕೆ

ಜಿಲ್ಲಾ ಚಾರ್ಟರ್ ಗವರ್ನರ್ ಆಗಿ ಬಸವರಾಜ ಹೇಡೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 8:56 IST
Last Updated 27 ಸೆಪ್ಟೆಂಬರ್ 2022, 8:56 IST
ಬೀದರ್‌ನ ಸಪ್ನಾ ಮಲ್ಟಿಫ್ಲೆಕ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಲೈನ್ಸ್ ಕ್ಲಬ್ ಇಂಟರ್‌ನ್ಯಾಷನಲ್‍ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಶಾಸಕ ರಹೀಂಖಾನ್ ಮಾತನಾಡಿದರು
ಬೀದರ್‌ನ ಸಪ್ನಾ ಮಲ್ಟಿಫ್ಲೆಕ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಲೈನ್ಸ್ ಕ್ಲಬ್ ಇಂಟರ್‌ನ್ಯಾಷನಲ್‍ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಶಾಸಕ ರಹೀಂಖಾನ್ ಮಾತನಾಡಿದರು   

ಬೀದರ್: ಅಲೈನ್ಸ್ ಕ್ಲಬ್ ಇಂಟರ್‌ನ್ಯಾಷನಲ್‍ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಪದಾಧಿಕಾರಿಗಳು: ಬಸವರಾಜ ಹೇಡೆ (ಚಾರ್ಟರ್ ಜಿಲ್ಲಾ ಗವರ್ನರ್), ಡಾ. ವಿ.ಜಿ. ರೆಡ್ಡಿ, ಚಂದ್ರಕಾಂತ ಗದ್ದಗಿ (ಚಾರ್ಟರ್ ಜಿಲ್ಲಾ ಉಪ ಗವರ್ನರ್), ಡಾ. ಅನಿಲ್ ರಾಯಪಳ್ಳಿ (ಕ್ಯಾಬಿನೆಟ್ ಕಾರ್ಯದರ್ಶಿ), ಬಸವರಾಜ ಹೊಸಮನಿ (ಖಜಾಂಚಿ) ಮತ್ತು ಬಾಬುರಾವ್ ದಾನಿ (ಸಾರ್ವಜನಿಕ ಸಂಪರ್ಕ ಅಧಿಕಾರಿ).

ಪದಗ್ರಹಣ ಸಮಾರಂಭ: ನಗರದ ಸಪ್ನಾ ಮಲ್ಟಿಫ್ಲೆಕ್ಸ್ ಸಭಾಂಗಣದಲ್ಲಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಇಂದು ಸಮಾಜ ಪರ ಕೆಲಸ ಮಾಡುವ ಸಂಘ ಸಂಸ್ಥೆಗಳ ಅವಶ್ಯಕತೆ ಇದೆ. ಬಸವರಾಜ ಹೇಡೆ ಅವರ ನೇತೃತ್ವದಲ್ಲಿ ಕ್ಲಬ್ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುವ ವಿಶ್ವಾಸ ಇದೆ ಎಂದು ಸಮಾರಂಭವನ್ನು ಉದ್ಘಾಟಿಸಿದ
ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ತಿಳಿಸಿದರು.
ಕ್ಲಬ್ ಚಟುವಟಿಕೆಗಳಿಗೆ ತಮ್ಮ ಸಹಕಾರ ಸದಾ ಇರಲಿದೆ ಎಂದು ಶಾಸಕ ರಹೀಂಖಾನ್ ಹೇಳಿದರು.

ಕ್ಲಬ್ ವತಿಯಿಂದ ಆರಂಭಿಸಲು ಉದ್ದೇಶಿಸಿರುವ ಶಾಲೆಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನ ಮಂಜೂರು ಮಾಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಭರವಸೆ ನೀಡಿದರು.

ಕ್ಲಬ್ ಚಾರ್ಟರ್ ಜಿಲ್ಲಾ ಗವರ್ನರ್ ಬಸವರಾಜ ಹೇಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಲಬ್‍ನಿಂದ ಮುಂಬರುವ ದಿನಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಅಸೋಸಿಯೇಷನ್ ಆಫ್ ಅಲೈನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್‍ ಸೌಥ್ ಮಲ್ಟಿಪಲ್ ಕೌನ್ಸಿಲ್ ಪಿಆರ್‍ಒ ಡಾ. ನವೀನಾ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.

ಕ್ಲಬ್ ನಿಕಟಪೂರ್ವ ಅಂತರರಾಷ್ಟ್ರೀಯ ಅಧ್ಯಕ್ಷ ಅವಿನಾಶ್ ಒಹರಿ, ಪ್ರಮುಖರಾದ ಬಿ.ಟಿ. ರಾಜು, ಆರ್. ಮಥಿವಣ್ಣನ್, ಬಾಲಚಂದ್ರನ್, ಡಿ.ಬಿ.ಜಿ. ಶಾಸ್ತ್ರಿ, ಕೆ. ಪ್ರಸಾದ್, ಬಸವರಾಜ ಕೋಲಿ, ಜೆಸ್ಸಿಕಾ ಥಾಮಸ್, ಮಾನಸಿ ಚೌಗಲೆ, ಭಾಗ್ಯಶ್ರೀ, ಡಾ. ಡಿ.ಎಂ. ಬೆಣ್ಣೂರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.