ADVERTISEMENT

‘20ರಂದು ಬಂದ್ ಬೇಡ: ಮಾತುಕತೆಗೆ ಬನ್ನಿ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 13:20 IST
Last Updated 17 ಸೆಪ್ಟೆಂಬರ್ 2022, 13:20 IST

ಹುಮನಾಬಾದ್: ‘ವೀರಶೈವ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ರಾಜ್ಯದಲ್ಲಿ ಸುಮಾರು 80 ಶಾಸಕರು, ಸಂಸದರು ಪತ್ರ ನೀಡಿದ್ದಾರೆ. ಆದರೆ ಕೇವಲ ಶಾಸಕ ರಾಜಶೇಖರ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ ಅವರ ವಿರುದ್ಧ ಪ್ರತಿಭಟನೆ ನಡೆಸುವುದು ಸೂಕ್ತ ಅಲ್ಲ’ ಎಂದು ದಲಿತ ಮುಖಂಡ ರಮೇಶ ಡಾಕುಳಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ವೀರಶೈವ ಜಂಗಮ ಹಾಗೂ ಬೇಡ ಜಂಗಮರ ಮಧ್ಯೆ ವ್ಯತ್ಯಾಸ ಇದೆ. ವೀರಶೈವ ಜಂಗಮರು ಬೇಡ ಜಗಮರಲ್ಲ. ಅವರನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಗೆ ಸೇರಿಸಬಾರದು ಎಂಬುದು ನಮ್ಮ ಒತ್ತಾಯ ಕೂಡ ಆಗಿದೆ’ ಎಂದರು.

‌ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಸೆಪ್ಟೆಂಬರ್ 20 ರಂದು ಹುಮನಾಬಾದ್ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಹೇಳಿದ ದಲಿತ ಸಮುದಾಯದ ಮುಖಂಡರ ಜತೆಗೆ ಮಾತುಕತೆ ನಡೆಸಲಾಗುತ್ತಿದೆ. ಭಾನುವಾರ (ಸೆ.18) ತಾಲ್ಲೂಕಿನ ವಿವಿಧ ಗ್ರಾಮಗಳ ದಲಿತ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಲಾಗುತ್ತದೆ. ಎಲ್ಲ ವಿಷಯಗಳ ಕುರಿತು ಸೂಕ್ತವಾಗಿ ಚರ್ಚೆ ಮಾಡಿ ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುವುದು ಎಂದರು.

ADVERTISEMENT

ದಲಿತ ಮುಖಂಡರಾದ ವಿಜಯಕುಮಾರ ನಾತೆ, ಮಲ್ಲಿಕಾರ್ಜುನ ಶರ್ಮಾ, ಪ್ರಭುರಾವ ತಾಳಮಡಗಿ, ನರಸಪ್ಪ ಪಸನೂರ್, ಮಲ್ಲಿಕಾರ್ಜುನ ಮಹೇಂದ್ರಕರ್, ಹುಲೆಪ್ಪ, ವೀರಪ್ಪ ಧುಮನಸೂರ್, ಸುರೇಶ ಘಾಂಗ್ರೆ ಹಾಗೂ ದೇವೇಂದ್ರ ಹಳ್ಳಿಖೇಡ(ಕೆ) ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.