ಕಮಲನಗರ: ತಾಲ್ಲೂಕಿನ ಠಾಣಾಕುಶನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ಬದಲಾವಣೆ ಮಾಡಿರುವುದನ್ನು ತಕ್ಷಣ ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಬಳತ (ಬಿ), ಬಳತ (ಕೆ), ಚಾಂದೂರಿ, ಬೆಡಕುಂದಾ, ಕೊರೆಕಲ್, ಠಾಣಾಕುಶನೂರು ಸೇರಿ ವಿವಿಧ ಗ್ರಾಮಗಳ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಮನವಿ ಸಲ್ಲಿಸಿದರು.
ಮಾಣೀಕರಾವ ಪಾಟೀಲ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ರಚನೆಯಾದ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಬದಲಾವಣೆ ಮಾಡಿ, ಮುಧೋಳ (ಬಿ) ಎಂದು ಕ್ಷೇತ್ರ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ಜಗನ್ನಾಥ ಪಸರಗೆ, ಜಗನ್ನಾಥ ಜಿರ್ಗೆ, ರವಿಶಂಕರ, ರಮೇಶ ಬಬಚಡೆ, ಉಮೇಶ ಜಿರ್ಗೆ, ಸಂಗಮೇಶ ಪಸರಗೆ, ಭದ್ರಯ್ಯ ಸ್ವಾಮಿ, ಚಾಂದ್ ಪಾಶಾ, ಗೋಸೋದ್ದೀನ್ ಬೆಡಗುಂದಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಧನರಾಜ ಬಾವಗೆ, ಸತ್ಯನಾರಾಯಣ, ಮಹೇಶ ಬೋಚರೆ, ವಸಂತ ಜೋಶಿ, ಚಾಂದೂರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನೇತಾಜಿ ಬಿರಾದಾರ, ದೀಪಕ ಪಾಟೀಲ, ಶಿವಾನಂದ ಸಾವಳೆ, ಅಂಗದ ಸಿಂಘೋಡೆ, ಗುಂಡಪ್ಪ ಶೆಂಬೆಳೆ ನಿಡೋದಾ, ಜ್ಞಾನೇಶ್ವರ ಹೊಳಗೆ, ಶಿವಪ್ರಸಾದ ಕೊರೆಕಲ್, ಯೋಗೇಶ ಬಿರಾದಾರ, ಜೋರ್ತಿಲಿಂಗ ಸ್ವಾಮಿ, ಶಾಂತೇಶ ಹಾಳಘೋಂಗಡೆ, ಶಾಂತು ಪರಶೇಟ್ಟೆ, ಪ್ರಕಾಶ ಸಜ್ಜನಶೇಟ್ಟೆ, ಮಾದಪ್ಪ ಜಿರ್ಗೆ, ಜಗನ್ನಾಥ ನಾಗೂರೆ, ಮಾರುತಿ ಮಾನುರೆ, ಅಬ್ದುಲಾ, ಸಲೀಮ ಕರಕ್ಯಾಳೆ, ಬಂಡೆಪ್ಪ ನಾಗುರೆ, ಸ್ವಾಮಿದಾಸ ನಾಗುರೆ, ಮಸಾಜಿ ಕಾಂಬಳೆ, ಶೇಶೇರಾವ ಹಲ್ಲಾಳೆ, ಪ್ರಭುರಾವ ಜಿರ್ಗೆ, ಓಂಕಾರ ಸ್ವಾಮಿ, ಬಾಬುರಾವ ಸಜ್ಜನಶೇಟ್ಟೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.