ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಕೊಳೆಯಿಂದ ಮುಕ್ತವಾದ ಬೀದರ್‌ನ ಪಾಪನಾಶಿನಿ ಕೆರೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 13:24 IST
Last Updated 6 ನವೆಂಬರ್ 2024, 13:24 IST
<div class="paragraphs"><p>ಪಾಪನಾಶ ಕೆರೆ (ಸ್ವಚ್ಛತೆಗೂ ಮೊದಲು ಹಾಗೂ ನಂತರ)</p></div>

ಪಾಪನಾಶ ಕೆರೆ (ಸ್ವಚ್ಛತೆಗೂ ಮೊದಲು ಹಾಗೂ ನಂತರ)

   

–ಪ್ರಜಾವಾಣಿ ಚಿತ್ರ

ಬೀದರ್‌: ನಗರದ ಪಾಪನಾಶ ಕೆರೆಯನ್ನು ನಗರಸಭೆಯ ಸಿಬ್ಬಂದಿ ಬುಧವಾರ ಸ್ವಚ್ಛಗೊಳಿಸಿದರು.

ADVERTISEMENT

‘ಪಾಪನಾಶ ಕೆರೆಗೆ ಕೊಳೆಯ ಪಾಪ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಬುಧವಾರ (ನ.6) ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡ ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್‌ ಅವರು ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದಾರೆ.

ಗಣೇಶ ಉತ್ಸವ, ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಪೂಜೆಗೆ ಬಳಸಿದ ವಸ್ತುಗಳನ್ನು ಜನರು ಪಾಪನಾಶ ಕೆರೆಗೆ ತಂದು ಸುರಿದಿದ್ದರು. ಇದರಿಂದ ಇಡೀ ಕೆರೆಯಂಗಳ ಮಲಿನಗೊಂಡಿತ್ತು. ದುರ್ಗಂಧಕ್ಕೆ ಕಾರಣವಾಗಿತ್ತು. ಇದು ಪರಿಸರಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ‘ಪ್ರಜಾವಾಣಿ’ ಸಚಿತ್ರ ಸಮೇತ ವಿವರವಾಗಿ ವರದಿ ಪ್ರಕಟಿಸಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.