ADVERTISEMENT

ಇಂಧನ ಉಳಿತಾಯಕ್ಕೆ ಆದ್ಯತೆ ಅಗತ್ಯ: ರಮೇಶ ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 14 ಮೇ 2024, 16:13 IST
Last Updated 14 ಮೇ 2024, 16:13 IST
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಸ್ಕಾಂ ಬೀದರ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರಮೇಶ ಕೆ. ಪಾಟೀಲ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಸ್ಕಾಂ ಬೀದರ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರಮೇಶ ಕೆ. ಪಾಟೀಲ   

ಬೀದರ್‌: ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪಂಪ್/ಉಪಕರಣಗಳ ತಂತ್ರಜ್ಞರು ಮತ್ತು ವಿದ್ಯಾರ್ಥಿಗಳಿಗಾಗಿ ‘ಬ್ಯುರೋ ಆಫ್ ಎನರ್ಜಿ ಎಫಿಷಿಯೆನ್ಸಿ’ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಸಹಯೋಗದಲ್ಲಿ ಇಂಧನ ದಕ್ಷತಾ ಕ್ರಮಗಳ ತಾಂತ್ರಿಕ ತರಬೇತಿ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಜೆಸ್ಕಾಂ ಬೀದರ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರಮೇಶ ಕೆ. ಪಾಟೀಲ ಉದ್ಘಾಟಿಸಿ, ಪ್ರಸ್ತುತ ದಿನಗಳಲ್ಲಿ ತಾಪಮಾನ ಜಾಗತಿಕ ಮಟ್ಟದ್ದಲ್ಲಿ ಹೆಚ್ಚಾಗಿದೆ. ಇಂಧನ ಉಳಿತಾಯ ಇಂದಿನ ತುರ್ತು ಆದ್ಯತೆಯಾಗಿದೆ ಎಂದು ಹೇಳಿದರು.

ಸದ್ಯ ಬೀದರ್‌ ಜಿಲ್ಲೆಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ 480 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆ ಮಾಡಡಲಾಗುತ್ತಿದೆ.  ಬೀದರ್‌ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಕಮಲ್ ಸೋಲಾರ್‌ ಮುಖ್ಯಸ್ಥ ಮಲ್ಲಿಕಾರ್ಜುನ ಜೀವಣಗಿ ಮಾತನಾಡಿ, ಸೋಲಾರ್ ಬಳಕೆಯಿಂದ ವಿದ್ಯುತ್ ಉಳಿತಾಯವಾಗುತ್ತದೆ. ಸಾರ್ವಜನಿಕರು ಸೋಲಾರ್‌ ಬಳಕೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.

ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್‌ನ ಮಚೇಂದ್ರ ಎಸ್. ಮಾತನಾಡಿ, ಆಧುನಿಕ ಜೀವನ ಪದ್ದತಿಯು ಸಂಪೂರ್ಣವಾಗಿ ವಿದ್ಯುತ್ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಜಗತ್ತಿನ ವಿದ್ಯುತ್‌ ಶಕ್ತಿ ಬೇಡಿಕೆಯ ಶೇ 61.5ರಷ್ಟು ಪಳೆಯುಳಿಕೆ ಇಂಧನಗಳಿಂದ ಪೂರೈಕೆಯಾಗುತ್ತಿದೆ. ಮಿಕ್ಕುಳಿದ ವಿದ್ಯುತ್‌ ಜಲ, ಪವನ, ಸೌರ, ಪರಮಾಣು ಮೂಲಗಳಿಂದ ಪಡೆಯಲಾಗುತ್ತಿದೆ. ಜಲ ವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಪಡೆಯಲು ಅಪಾರ ಪ್ರಮಾಣದ ಅರಣ್ಯ ನಾಶ ಹಾಗೂ ಭೂಮಿ ಮುಳುಗಡೆಯ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನವೀಕರಿಸಬಹುದಾದ ವಿದ್ಯುತ್ ಮೂಲಗಳೇ ಇಂದಿನ ಅವಶ್ಯಕತೆಗಳಾಗಿವೆ ಎಂದು ಹೇಳಿದರು.

ADVERTISEMENT

ಸರ್ಕಾರಿ ಪಾಲಿಟೆಕ್ನಿಕ್‌ನ ಜಾಕೀರ್ ಹುಸೇನ್, ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಡಾ.ನೀಲಶೆಟ್ಟಿ ಕೆ., ಉದ್ಯಮಿ ರಾಜು ಬೆಮಳಖೇಡಕರ್, ಬಕ್ಕಪ್ಪ ನಿರ್ಣಾಕರ, ಅರುಣ ಮೊಕಾಶಿ, ಸದಾಶಿವಪ್ಪ ಬಿರಾದಾರ, ಅಮಿತ್ ಜನವಾಡಕರ್ ಹಾಜರಿದ್ದರು.

ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಪ್ರತಿಯೊಬ್ಬರೂ ಸೋಲಾರ್‌ಗಳನ್ನು ಅಳವಡಿಸಿಕೊಂಡು ವಿದ್ಯುತ್‌ ಉಳಿತಾಯದ ಬಗ್ಗೆ ಗಮನಹರಿಸಬೇಕು ಎಂದರು.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ದೇವೇಂದ್ರಪ್ಪ ಹಂಚೆ ಮಾತನಾಡಿ, ತರಬೇತಿಗಳಲ್ಲಿ ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆಯಲು ಸೀಮಿತರಾಗದೆ ಜ್ಞಾನಾರ್ಜನೆಗೆ ಭಾಗವಹಿಸಬೇಕು ಎಂದರು.

ಸರ್ಕಾರಿ ಪಾಲಿಟೆಕ್ನಿಕ್‌ನ ಕುಲಸಚಿವ ಶೇಖ್ ಸಿರಾಜುದ್ದಿನ್‌, ವಿಜಯಕುಮಾರ ಜಾಧವ, ವಕೀಲ ಎಂ.ಪಟೇಲ್, ಶಿವಕುಮಾರ ಕಟ್ಟೆ, ಗೀತಾ ಪಾಟೀಲ, ಹಾಜರಿದ್ದರು. 100 ಜನ ತರಬೇತಿಯಲ್ಲಿ ಪಾಲ್ಗೊಂಡಿದ್ದರು. 

ತಾಂತ್ರಿಕ ತರಬೇತಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಸೋಲಾರ್‌ ಪ್ಯಾನಲ್‌ ಕುರಿತು ಮಾಹಿತಿ ನೀಡಲಾಯಿತು

Highlights - ಜಿಲ್ಲೆಯಲ್ಲಿ ಇಂಧನದಿಂದ 480 ಮೆ.ವ್ಯಾ. ವಿದ್ಯುತ್‌ ಇಂಧನ ಮೂಲಗಳಿಂದ ವಿದ್ಯುತ್‌ ಉತ್ಪಾದನೆಯಲ್ಲಿ ಜಿಲ್ಲೆ ಮೊದಲು ವಿದ್ಯುತ್‌ ಮೇಲೆ ಹೆಚ್ಚಿದ ಅವಲಂಬನೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.