ADVERTISEMENT

ಔರಾದ್: ಕೃಷಿ ಇಲಾಖೆ ಯೋಜನೆ ದುರ್ಬಳಕೆ ತಡೆಯಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 15:22 IST
Last Updated 2 ಜುಲೈ 2024, 15:22 IST
ಔರಾದ್ ತಹಶೀಲ್ದಾರ್ ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯವರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರಿಗೆ ಮನವಿಪತ್ರ ಸಲ್ಲಿಸಿದರು
ಔರಾದ್ ತಹಶೀಲ್ದಾರ್ ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯವರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರಿಗೆ ಮನವಿಪತ್ರ ಸಲ್ಲಿಸಿದರು   

ಔರಾದ್: ಕೃಷಿ ಇಲಾಖೆಯಿಂದ ರೈತರಿಗೆ ನೀಡುವ ಯೋಜನೆಗಳ ದುರ್ಬಳಕೆ ತಡೆಯುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಇಲ್ಲಿಯ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಸಮಿತಿ ತಾಲ್ಲೂಕು ಸಂಚಾಲಕ ಧನರಾಜ ಮುಸ್ತಾಪುರ, ಗಣಪತರಾವ ಶೆಂಬೆಳ್ಳಿ, ದತ್ತು ಚಿಕ್ಲಿ ಮತ್ತಿತರರು ಮಾತನಾಡಿ, ‘ಜಲಾನಯನ ಯೋಜನೆ ಬದು ನಿರ್ಮಾಣ ಕ್ರಿಯಾ ಯೋಜನೆ ಪ್ರಕಾರ ಆಗಿಲ್ಲ. ಸೋಲಾರ್ ದೀಪ ಅಳವಡಿಕೆಯಲ್ಲೂ ನಿಯಮ ಪಾಲನೆಯಾಗಿಲ್ಲ. ಸೋಯಾಬಿನ್ ಬೀಜ ಪರೀಕ್ಷೆಯಲ್ಲೂ ವಂಚನೆಯಾಗಿದೆ. ಜಲಾನಯನ ಯೋಜನೆಯಲ್ಲಿ ರೈತರು ತಮ್ಮ ಜಮೀನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶವಿದೆ. ಆದರೆ ಅಧಿಕಾರಿಗಳು ತಮಗೆ ಬೇಕಾದವರಿಗೆ ಗುತ್ತಿಗೆ ಕೊಟ್ಟು ಕೆಲಸ ಮಾಡಿಸಿದ್ದಾರೆ. ಖಾಲಿಯಾದ ಕೃಷಿ ಅಧಿಕಾರಿಗಳ ಹುದ್ದೆ ಪ್ರಭಾರ ನೀಡುವಲ್ಲಿಯೂ ಸರ್ಕಾರದ ನಿಯಮ ಗಾಳಿಗೆ ತೂರಿದ್ದಾರೆ. ಈ ಕುರಿತು ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ಅವರಿಗೆ ಸಂಪರ್ಕಿಸಿದರೆ ಸೂಕ್ತ ಮಾಹಿತಿ ನೀಡತ್ತಿಲ್ಲ. ಹೀಗಾಗಿ ಈ ಎಲ್ಲ ಯೋಜನೆಗಳ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಜಿಲ್ಲಾಧಿಕಾರಿಗಳ ಹೆಸರಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿದರು

ಮುಖಂಡ ಸುಧಾಕರ್ ಕೊಳ್ಳೂರ್, ತಾನಾಜಿ ತೋರಣೆಕರ್, ರಾಮಣ್ಣ, ಸತೀಶ್ ಹಾರೂರಗೇರಿ, ಮಾರುತಿ ಹೆಡಗಾಪುರ, ಮತ್ತಿತರರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.