ADVERTISEMENT

ಅಲ್ಲಮಪ್ರಭು ಸಂಘಕ್ಕೆ ₹62.59 ಲಕ್ಷ ಲಾಭ

ಸದಸ್ಯರಿಗೆ ಶೇ 25 ರಷ್ಟು ಲಾಭಾಂಶ: ಅಧ್ಯಕ್ಷ ಕುಶಾಲರಾವ್ ಪಾಟೀಲ ಘೋಷಣೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 15:50 IST
Last Updated 1 ಡಿಸೆಂಬರ್ 2020, 15:50 IST
ಬೀದರ್‌ನ ಬಸವ ಮಂಟಪದಲ್ಲಿ ನಡೆದ ಅಲ್ಲಮಪ್ರಭು ಪತ್ತಿನ ಸಹಕಾರ ಸಂಘ ನಿಯಮಿತದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ಮಾತನಾಡಿದರು
ಬೀದರ್‌ನ ಬಸವ ಮಂಟಪದಲ್ಲಿ ನಡೆದ ಅಲ್ಲಮಪ್ರಭು ಪತ್ತಿನ ಸಹಕಾರ ಸಂಘ ನಿಯಮಿತದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ಮಾತನಾಡಿದರು   

ಬೀದರ್: ಅಲ್ಲಮಪ್ರಭು ಪತ್ತಿನ ಸಹಕಾರ ಸಂಘ ನಿಯಮಿತವು 2019-20ನೇ ಸಾಲಿನಲ್ಲಿ ₹62.59 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ತಿಳಿಸಿದರು.

ನಗರದ ಬಸವ ಮಂಟಪದಲ್ಲಿ ನಡೆದ ಸಂಘದ 18ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸದಸ್ಯರಿಗೆ ಶೇ 25 ರಷ್ಟು ಲಾಭಾಂಶ ಕೊಡಲಾಗುವುದು ಎಂದು ಪ್ರಕಟಿಸಿದರು.

ಮಾರ್ಚ್ 31 ರ ಅಂತ್ಯಕ್ಕೆ ಸಂಘ ₹11.54 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹7.95 ಕೋಟಿ ವಿವಿಧ ರೀತಿಯ ಠೇವಣಿಗಳು ಇವೆ. ಕಾಯ್ದಿಟ್ಟ ಮತ್ತು ಇತರ ನಿಧಿಗಳ ಮೊತ್ತ ₹2.61 ಕೋಟಿ ಆಗಿದೆ. ಸದಸ್ಯರಿಗೆ ₹8.16 ಕೋಟಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಈಗಾಗಲೇ ಸಂಘಕ್ಕೆ 30X40 ಅಳತೆಯ ನಿವೇಶನ ಖರೀದಿಸಲಾಗಿದೆ. ಅದರ ಪಕ್ಕದಲ್ಲೇ ಖಾಲಿ ಇರುವ ಇನ್ನೊಂದು ನಿವೇಶನ ಖರೀದಿಸಿ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ. ಸಂಘದ ಅಡಿಟ್ ವೃಂದ ‘ಬಿ’ ದಿಂದ ‘ಎ’ಗೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ ಸ್ವಾಮಿ ವಾರ್ಷಿಕ ವರದಿ ವಾಚಿಸಿದರು. ಸದಸ್ಯ ಬಾಬುರಾವ್ ಪಾಟೀಲ ಮಾತನಾಡಿದರು.

ವೈದ್ಯರು ಮತ್ತು ನರ್ಸಿಂಗ್ ಹೋಂ ಅಸೋಸಿಯೇಶನ್ ಅಧ್ಯಕ್ಷ ಡಾ.ಸಿ. ಆನಂದರಾವ್ ಹಾಗೂ ಹಿರಿಯ ವಕೀಲ ಗಂಗಶೆಟ್ಟಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ವಿವೇಕಾನಂದ ಪಟ್ನೆ, ಅಶೋಕ ಶೀಲವಂತ, ಬಸವಕುಮಾರ ಪಾಟೀಲ, ರಾಜಕುಮಾರ ಬುಡ್ಡನೋರ, ರಾಜಕುಮಾರ ಕಮಠಾಣೆ, ಪ್ರಕಾಶ ನಿಂಬೂರೆ, ಸುಮನ್ ಬಿ. ಪಾಟೀಲ ಉಪಸ್ಥಿತರಿದ್ದರು. ನಿರ್ದೇಶಕ ರಾಜೇಂದ್ರಕುಮಾರ ಗಂದಗೆ ಸ್ವಾಗತಿಸಿದರು. ಉಪಾಧ್ಯಕ್ಷ ಸಂಜುಕುಮಾರ ಪಿ. ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.