ADVERTISEMENT

ಆರ್ಯ ಈಡಿಗ ಕಲ್ಯಾಣ ಮಂಟಪಕ್ಕೆ ಅನುದಾನ ಒದಗಿಸಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 15:40 IST
Last Updated 22 ಮಾರ್ಚ್ 2021, 15:40 IST
ಬೀದರ್‌ನ ಜೈ ಭವಾನಿ ಫಂಕ್ಷನ್ ಹಾಲ್‍ನಲ್ಲಿ ಆರ್ಯ ಈಡಿಗ ಸಂಘದ ತಾಲ್ಲೂಕು ಘಟಕದ ಸಭೆ ನಡೆಯಿತು
ಬೀದರ್‌ನ ಜೈ ಭವಾನಿ ಫಂಕ್ಷನ್ ಹಾಲ್‍ನಲ್ಲಿ ಆರ್ಯ ಈಡಿಗ ಸಂಘದ ತಾಲ್ಲೂಕು ಘಟಕದ ಸಭೆ ನಡೆಯಿತು   

ಬೀದರ್: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಆರ್ಯ ಈಡಿಗ ಸಮಾಜದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸರ್ಕಾರ ರೂ. 5 ಕೋಟಿ ಮಂಜೂರು ಮಾಡಬೇಕು ಎಂದು ಆರ್ಯ ಈಡಿಗ ಸಂಘ ಒತ್ತಾಯಿಸಿದೆ.

ನಗರದ ಹಾರೂರಗೇರಿ ಕಮಾನ್ ಹತ್ತಿರದ ಜೈ ಭವಾನಿ ಫಂಕ್ಷನ್ ಹಾಲ್‍ನಲ್ಲಿ ನಡೆದ ಆರ್ಯ ಈಡಿಗ ಸಂಘದ ಬೀದರ್ ತಾಲ್ಲೂಕು ಘಟಕದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಒಕ್ಕೋರಲಿನಿಂದ ಈ ಬೇಡಿಕೆ ಮಂಡಿಸಿದರು.

ಸಮುದಾಯಕ್ಕೆ ಸರ್ಕಾರದಿಂದ ವಿವಿಧ ಸೌಕರ್ಯ ಒದಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ADVERTISEMENT

ಸಂಘದ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಕಿಷ್ಟಯ್ಯ ಈಡಗರ್, ಉಪಾಧ್ಯಕ್ಷ ಶ್ರೀಮಂತ ಲಿಂಗಪ್ಪ ಹಾಗೂ ಇತರ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಮುಖಂಡರಾದ ಅಶೋಕ ತೆಲಂಗ್, ಶಿವಕುಮಾರ, ಅನುರಾಗ್ ಮುಂಗೆ, ಉಮೇಶ ತೆಲಂಗ್, ಸಿದ್ದರಾಮ ಜ್ಯಾಂತಿಕರ್, ಪ್ರದೀಪ್ ನಾರಾಯಣ, ಅನಿಲ್ ಚಂದ್ರಕಾಂತ, ಪ್ರಕಾಶ ಧನರಾಜ, ಶ್ರೀಧರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.