ಬಸವಕಲ್ಯಾಣ (ಬೀದರ್ ಜಿಲ್ಲೆ): ತಾಲ್ಲೂಕಿನ ಘಾಟಹಿಪ್ಪರ್ಗಾ ವ್ಯಾಪ್ತಿಯಲ್ಲಿನ ಗುಡ್ಡದಲ್ಲಿ ಹೆಬ್ಬಾವು ಜೀವಂತ ಮೇಕೆಯನ್ನು ನುಂಗಿದೆ. ಮೇಕೆಯು ಕುರಿಗಾಹಿ ರಾಜಕುಮಾರ ರೊಡ್ಡೆ ಎಂಬುವರಿಗೆ ಸೇರಿದೆ.
10 ಅಡಿಯಷ್ಟು ಉದ್ದದ ಹೆಬ್ಬಾವು, ಗುಡ್ಡದಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ದಾಳಿ ನಡೆಸಿ ನುಂಗಿದೆ. ಇದರಿಂದ ಭಯಗೊಂಡ ರಾಜಕುಮಾರ ಗ್ರಾಮಸ್ಥರಿಗೆ ವಿಷಯ ತಿಳಿಸಿದರು. ಆಗ ಸ್ಥಳಕ್ಕೆ ಬಂದು ಉರಗ ತಜ್ಞ ಅಶೋಕಶೆಟ್ಟಿ ಗುಂಡೂರ ಜೊತೆಗೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯವರು ಪರಿಶೀಲಿಸಿದರು.
‘ಹೆಬ್ಬಾವಿಗೆ ಹೆಚ್ಚೇನೂ ತೊಂದರೆ ಮಾಡದೇ, ಅರಣ್ಯದಲ್ಲಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳಾದ ಮುರ್ತುಜಾ ಖಾದ್ರಿ, ಸಂತೋಷ ಯಾಚೆ, ನಿಸಾರ ಅಹಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.