ADVERTISEMENT

‘ಸರ್ಕಾರಿ ಫ್ರೌಢಶಾಲೆ ಆರಂಭಕ್ಕೆ ಶೀಘ್ರ ಆದೇಶ’

ಕಮಲನಗರದಲ್ಲಿ ಜನಸ್ಪಂದನ ಕಾರ್ಯಕ್ರಮ: ಜಿಲ್ಲಾಧಿಕಾರಿ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:05 IST
Last Updated 3 ಜುಲೈ 2024, 16:05 IST
ಕಮಲನಗರ ಪಟ್ಟಣದ ತಹಶಿಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರು ಜನಸ್ಪಂದನ ಕಾರ್ಯಕ್ರಮ ನಡೆಸಿದರು
ಕಮಲನಗರ ಪಟ್ಟಣದ ತಹಶಿಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರು ಜನಸ್ಪಂದನ ಕಾರ್ಯಕ್ರಮ ನಡೆಸಿದರು   

ಕಮಲನಗರ: ‘ಪಟ್ಟಣದಲ್ಲಿ ಸರ್ಕಾರಿ ಫ್ರೌಢಶಾಲೆ ಆರಂಭಿಸಲು ಪದೇ ಪದೇ ಸಾರ್ವಜನಿಕರಿಂದ ಮನವಿ ಪತ್ರಗಳು ಬರುತ್ತಿವೆ. ಈಗಾಗಲೇ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾತನಾಡಿದ್ದಾರೆ. ಆದ್ದರಿಂದ  ಒಂದು ವಾರದಲ್ಲಿ ಸರ್ಕಾರಿ ಫ್ರೌಢಶಾಲೆ ಆರಂಭಕ್ಕೆ ಆದೇಶ ಬರುತ್ತದೆ’ ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೀಡಿದ ಮನವಿ ಪತ್ರ ಸ್ವಿಕರಿಸಿ ಅವರು ಮಾತನಾಡಿದರು.

‘ಯಾವುದೇ ಒಂದು ನಿರ್ದಿಷ್ಟ ಜಾತಿಗೆ ಸ್ಮಶಾನ ಭೂಮಿ ಮಂಜೂರಿ ಮಾಡಲು ಬರುವುದಿಲ್ಲ. ಆದರೆ ಸಾರ್ವಜನಿಕವಾಗಿ ನೀಡಲು ಅವಕಾಶವಿದೆ. ನಾವು ಈಗಾಗಲೇ ಎಲ್ಲಾ ಕಡೆಗಳಲ್ಲಿ ಸ್ಮಶಾನ ಭೂಮಿ ನೀಡಿದ್ದೇವೆ’ ಎಂದು ಕಮಲನಗರದ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಅವಿನಾಶ ಶಿಂಧೆ ಮತ್ತು ಕಾರ್ಯದರ್ಶಿ ಪ್ರವೀಣ ಕದಮ್ ಅವರು ನೀಡಿದ ಅರ್ಜಿ ಕುರಿತು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ADVERTISEMENT

ಕಮಲನಗರ ತಾಲ್ಲೂಕಿನ 52 ಹಳ್ಳಿಗಳಲ್ಲಿ ಎಸ್‌ಸಿ ಸಮಾಜಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಶಿಂಧೆ ಮತ್ತು ಕದಮ್‌ ಮನವಿ ಮಾಡಿದರು.

ಕಮಲನಗರ ಪಟ್ಟಣದಲ್ಲಿ ರಸ್ತೆ ನಿಯಮಗಳನ್ನು ಅಳವಡಿಸಲು, ಕಮಲನಗರ –ಸೋನಾಳ ರಸ್ತೆಯು ಚಿಕ್ಕದಾಗಿದೆ. ಆದಷ್ಟು ಕಾನೂನಿನ ಪ್ರಕಾರ ಅಗಲೀಕರಣ ಮಾಡುವಂತೆ ಬಂದ ಅರ್ಜಿಗೆ ಉತ್ತರಿಸಿದ ಜಿಲ್ಲಾಧಿಕಾರಿ, ಸದ್ಯ ಅಗಲೀಕರಣ ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜೆಜೆಎಂ ಕಾಮಗಾರಿ ಕಳಪೆ ಗುಣಮಟ್ಟ ಕುರಿತು ಹೆಚ್ಚು ಮನವಿಗಳು ಬಂದಿವೆ. ಹೀಗಾಗಿ ಒಂದು ವಾರದಲ್ಲಿ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಜೆಇ ಸುಭಾಷ್‌ ಅವರಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಾದ ಸೂಚನೆ ನೀಡಿದರು.

ಕಮಲನಗರ ತಾಲ್ಲೂಕಿನಲ್ಲಿ ನೋಂದಣಿ ಕಚೇರಿಯಲ್ಲಿ ತಂತ್ರಾಂಶದ ಸಮಸ್ಯೆ ಉಂಟಾಗಿದೆ. ಇಲ್ಲಿ ಖರೀದಿ ಮತ್ತು ಮಾರಾಟದ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕಮಲನಗರ ರೈತಸಂಘದ ಅಧ್ಯಕ್ಷ ಪ್ರವೀಣ ಕುಲಕರ್ಣಿ ಮತ್ತು ತಂಡದವರು ಕೃಷಿ ಅಭಿವೃದ್ಧಿ, ಆಟದ ಮೈದಾನ, ನಮ್ಮ ಹೊಲ ನಮ್ಮ ತೋಟ, ಕೆರೆಯ ಪಕ್ಕದಲ್ಲಿ ವಾಯುವಿಹಾರಕ್ಕೆ ಅವಕಾಶ ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದರು.

ಹೋರಂಡಿ, ಮದನೂರ ಹಂದಿಕೇರಾ ಸೇರಿ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ ಎಂಬ ಅರ್ಜಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಒಂದು ವಾರದಲ್ಲಿ ನೀರು ಎಲ್ಲಾ ಗ್ರಾಮಗಳಲ್ಲಿ ಸರಿಯಾಗಿ ಬರುವಂತೆ ಮಾಡದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಕಮಲನಗರ ಮತ್ತು ಔರಾದ್‌ ತಾಲ್ಲೂಕಿಗೆ ಕೆರೆ ತುಂಬುವ ಯೋಜನೆಗೋಸ್ಕರ ₹ 700 ಕೋಟಿ ಅನುದಾನ ಬಂದಿದೆ ಜಿಲ್ಲಾಧಿಕಾರಿ ಎಂದು ತಿಳಿಸಿದರು.

‘ಎಲ್ಲಾ ವಿಭಾಗಗಳ ತಾಲ್ಲೂಕು ಅಧಿಕಾರಿಗಳು ತಪ್ಪದೇ ವಾರದಲ್ಲಿ ಒಂದು ದಿನ ತಾಲ್ಲೂಕು ಪಂಚಾಯತ್‌ನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಬೆಕು’ ಎಂದು ಸೂಚಿಸಿದರು.

ಕಮಲನಗರ ಪತ್ರಕರ್ತರು ಪತ್ರಿಕಾಭವನಕ್ಕೆ ನೀವೆಶನ ನೀಡಲು ಮನವಿ ಮಾಡಿದಾಗ, ಸ್ಥಳದಲ್ಲಿದ ಇಒ ಮಾಣಿಕರಾವ ಪಾಟೀಲ್ ಮತ್ತು ತಹಶೀಲ್ದಾರ್ ಅಮಿತ್‌ ಕುಮಾರ ಕುಲಕರ್ಣಿ ಹಾಗೂ ಕಮಲನಗರ ಪಿಡಿಒ ರಾಜಕುಮಾರ ತಂಬಾಕೆಯವರನ್ನು ಪತ್ರಿಕಾಭವನಕ್ಕೆ ನೀವೇಶನ ನೀಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಮಲನಗರ ಗ್ರೇಡ್– 2 ತಹಶೀಲ್ದಾರ್ ರಮೇಶ ಪೆದ್ದೆ, ಅಶ್ವಿನ್‌ ಪಾಟೀಲ್, ತಾ.ಪಂ. ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆ ಮತ್ತು ಹಣಮಂತರಾಯ ಕೌಟಗೆ, ತಾಲ್ಲೂಕು ಆರೋಗ್ಯಾಧಿಕಾರಿ ಗಾಯತ್ರಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಶ್ರೀಮಂತ, ಪಶುಸಂಗೋಪನಾ ಸಹಾಯಕ ನಿರ್ದೇಶಕ ಸೋಮಶೇಖರ್, ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.