ADVERTISEMENT

ಬೀದರ್‌ನಲ್ಲಿ ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 14:41 IST
Last Updated 8 ಏಪ್ರಿಲ್ 2024, 14:41 IST
<div class="paragraphs"><p>ತುಂತುರು ಮಳೆ ಸುರಿಯಿತು</p></div>

ತುಂತುರು ಮಳೆ ಸುರಿಯಿತು

   

ಬೀದರ್: ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸೋಮವಾರ ರಾತ್ರಿ ತುಂತುರು ಮಳೆಯಾಗಿದೆ.

ರಾತ್ರಿ 7.50ಕ್ಕೆ ದಿಢೀರನೆ ಆರಂಭವಾದ ತುಂತುರು ಮಳೆ ಕೆಲಕಾಲ ಸುರಿಯಿತು. ಆರಂಭದಲ್ಲಿ ಮಳೆ ಬಿರುಸಾಗಿ ಸುರಿಯಲು ಆರಂಭಿಸಿತು. ಆದರೆ, ಕೆಲವೇ ನಿಮಿಷಗಳಲ್ಲಿ ನಿಂತು ಆನಂತರ ತುಂತುರು ಹನಿಗಳು ಉದುರಿದವು.

ADVERTISEMENT

ಬಿಸಿಲಿನಿಂದ ನೆಲ ಕಾದು ಕಾವಲಿಯಂತಾಗಿದ್ದು, ಮಳೆ ಆರಂಭವಾಗುತ್ತಿದ್ದಂತೆ ಜನ ಖುಷಿಪಟ್ಟಿದ್ದರು. ಆದರೆ, ಕೆಲ ನಿಮಿಷಗಳಲ್ಲಿಯೇ ಮಳೆ ನಿಂತಿದ್ದರಿಂದ ನಿರಾಸೆಯಾದರು. ಆದರೆ, ಜೋರಾಗಿ ತಂಗಾಳಿ ಬೀಸುತ್ತಿದ್ದು, ಬಿಸಿಲ ಝಳ ನಿಂತಿದೆ. ಎರಡು ದಿನಗಳ ಹಿಂದೆ ಜಿಲ್ಲೆಯ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿತ್ತು. ಸೋಮವಾರ ತಗ್ಗಿದೆ. ಸೋಮವಾರ ಜಿಲ್ಲೆಯಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಮುಂದಿನ ನಾಲ್ಕು ದಿನ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.