ADVERTISEMENT

ಬೀದರ್‌ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 5:11 IST
Last Updated 18 ಜೂನ್ 2024, 5:11 IST
ಬೀದರ್‌ನಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ನಗರದ ಕೇಂದ್ರ ಬಸ್‌ ನಿಲ್ದಾಣ ಸಮೀಪದ ಮುಖ್ಯರಸ್ತೆಯಲ್ಲಿ ಅಪಾರ ನೀರು ಸಂಗ್ರಹಗೊಂಡಿತು
ಬೀದರ್‌ನಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ನಗರದ ಕೇಂದ್ರ ಬಸ್‌ ನಿಲ್ದಾಣ ಸಮೀಪದ ಮುಖ್ಯರಸ್ತೆಯಲ್ಲಿ ಅಪಾರ ನೀರು ಸಂಗ್ರಹಗೊಂಡಿತು   

ಬೀದರ್‌: ಕಳೆದೆರಡು ದಿನಗಳಿಂದ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಸೋಮವಾರ ಸುರಿದ ಮಳೆ ಕೊಂಚ ಮುದ ನೀಡಿತು.

ಜೂನ್‌ ಆರಂಭದಿಂದಲೂ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಎಲ್ಲೆಡೆ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಆದರೆ, ಶನಿವಾರ, ಭಾನುವಾರ ಏಕಾಏಕಿ ಬಿರು ಬಿಸಿಲು ಕಾಣಿಸಿಕೊಂಡಿತು. ಜನರಿಗೆ ಪುನಃ ಬೇಸಿಗೆಯ ಕಹಿ ಅನುಭವವಾಯಿತು. ಮತ್ತೆ ಮಳೆ ಕೈಕೊಟ್ಟಿತು ಎಂದು ಭಾವಿಸುವಷ್ಟರಲ್ಲಿ ಸೋಮವಾರ ಮಳೆರಾಯನ ಆಗಮನವಾಗಿದೆ.

ಸೋಮವಾರ ಬೆಳಿಗ್ಗೆಯಿಂದ ಕಾರ್ಮೋಡ ಕವಿದಿತ್ತು. ಮಧ್ಯಾಹ್ನ ಭಾರಿ ಗುಡುಗಿನ ಸದ್ದಿನೊಂದಿಗೆ ಕೆಲಕಾಲ ಮಳೆಯಾಯಿತು. ಇದರಿಂದ ವಾತಾವರಣ ಸಂಪೂರ್ಣ ತಂಪಾಯಿತು. ಬೀದರ್‌, ಭಾಲ್ಕಿ ಹಾಗೂ ಹುಲಸೂರಿನಲ್ಲೂ ಮಳೆಯಾಗಿದೆ. ಬೀದರ್‌ ಜಿಲ್ಲೆಯಲ್ಲಿ 2.95 ಮಿ.ಮೀ ಸಾಧಾರಣ ಮಳೆಯಾಗಿದೆ. ಕಮಲನಗರ ಹೋಬಳಿಯಲ್ಲಿ ಅತಿ ಹೆಚ್ಚು 25.40 ಮಿ.ಮೀ ವರ್ಷಧಾರೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.