ADVERTISEMENT

ಬೀದರ್‌ನಲ್ಲಿ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 15:11 IST
Last Updated 29 ಜೂನ್ 2024, 15:11 IST
ಶನಿವಾರ ಸಂಜೆ ಬೀದರ್‌ನಲ್ಲಿ ಬಿರುಸಿನ ಮಳೆ ಸುರಿಯಿತು. ನೌಬಾದ್‌ನಲ್ಲಿ ಮಹಿಳೆಯೊಬ್ಬರು ಕೊಡೆ ಹಿಡಿದುಕೊಂಡು ನೀರಿನಲ್ಲೇ ರಸ್ತೆ ದಾಟಿದರು
–ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಶನಿವಾರ ಸಂಜೆ ಬೀದರ್‌ನಲ್ಲಿ ಬಿರುಸಿನ ಮಳೆ ಸುರಿಯಿತು. ನೌಬಾದ್‌ನಲ್ಲಿ ಮಹಿಳೆಯೊಬ್ಬರು ಕೊಡೆ ಹಿಡಿದುಕೊಂಡು ನೀರಿನಲ್ಲೇ ರಸ್ತೆ ದಾಟಿದರು –ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ   

ಬೀದರ್‌: ಹಲವು ದಿನಗಳ ಬಿಡುವಿನ ನಂತರ ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶನಿವಾರ ಸಂಜೆ ಬಿರುಸಿನ ಮಳೆಯಾಗಿದೆ.

ಜೂನ್‌ ಮೊದಲ ವಾರದ ನಂತರ ಮಳೆಯಾಗಿರಲಿಲ್ಲ. ಬಿತ್ತನೆ ಮಾಡಿದ ರೈತರು ಮಳೆಗಾಗಿ ಚಾತಕಪಕ್ಷಿಗಳಂತೆ ಕಾದು ಕುಳಿತಿದ್ದರು. ಶನಿವಾರ ಸುರಿದ ಮಳೆಗೆ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಬೀದರ್‌ ನಗರ ಹಾಗೂ ತಾಲ್ಲೂಕಿನ ಕೆಲವು ಗ್ರಾಮಗಳಿಗಷ್ಟೇ ಮಳೆ ಸೀಮಿತವಾಗಿತ್ತು. ಹುಲಸೂರ, ಭಾಲ್ಕಿಯಲ್ಲಿ ಕೆಲನಿಮಿಷಗಳವರೆಗೆ ಮಳೆಯಾಗಿದೆ.

ಬೀದರ್‌ನಲ್ಲಿ ಸಂಜೆ 4ಗಂಟೆಗೆ ಆರಂಭಗೊಂಡ ಮಳೆ ಅರ್ಧಗಂಟೆಗೂ ಹೆಚ್ಚು ಕಾಲ ಸುರಿದಿದೆ. ಜೋರು ಮಳೆಗೆ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿ ಹರಿದಿದೆ. ಗಟಾರ ನೀರು ರಸ್ತೆ ಮೇಲೆ ಹರಿದಿದ್ದರಿಂದ ದುರ್ಗಂಧ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.