ಔರಾದ್: ‘ಪಟ್ಟಣದಲ್ಲಿ ಬುಧವಾರ (ಮಾ.15) ರೇಣುಕಾಚಾರ್ಯ ಜಯಂತಿ ಆಚರಿಸಲಾಗುತ್ತಿದೆ’ ಎಂದು ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ದೇಶಮುಖ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ,‘ಸರ್ಕಾರ ರೇಣುಕಾಚಾರ್ಯ ಜಯಂತಿ ಆಚರಣೆಗೆ ಆದೇಶ ನೀಡಿರುವುದು ಸಂತಸದ ಸಂಗತಿ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ವಿಶ್ವಕ್ಕೆ ಶಾಂತಿ ಬೋಧಿಸಿದ ರೇಣುಕಾಚಾರ್ಯರ ಜಯಂತಿಯನ್ನು ಪಟ್ಟಣದ ಬಸವೇಶ್ವರ ವೃತ್ತದ ಬಳಿ ಬುಧವಾರ ಆಯೋಜಿಸಲಾಗಿದೆ’ ಎಂದರು.
ಹೆಡಗಾಪುರದ ಶಿವಲಿಂಗ ಶಿವಾಚಾರ್ಯರು, ತಮಲೂರಿನ ಶಿವಾನಂದ ಶಿವಾಚಾರ್ಯರು, ಗೋರ್ಟಾದ ರಾಜಶೇಖರ ಶಿವಾಚಾರ್ಯರು, ಹಣೇಗಾಂವದ ಶಂಕರಲಿಂಗ ಶಿವಾಚಾರ್ಯರು, ಕೌಳಾಸದ ಬಸವಲಿಂಗ ಶಿವಾಚಾರ್ಯರು, ಮಹಾದೇವ ಶ್ರೀಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕನ್ನಡಾಂಬೆ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಜಯಂತಿಯ ಸ್ವಾಗತ ಸಮಿತಿ ಉಪಾಧ್ಯಕ್ಷ ಶಿವರಾಜ ಅಲ್ಮಾಜೆ, ಮುಖಂಡ ಶರಣಪ್ಪ ಪಂಚಾಕ್ಷರಿ, ಅಮರ ಎಡವೆ, ಡಾ. ಧನರಾಜ ರಾಗಾ, ಸುನೀಲಕುಮಾರ ದೇಶಮುಖ, ನಂದಕುಮಾರ ಜ್ಯಾಂತೆ, ಶಿವಕುಮಾರ ಎಡವೆ, ಕಿರಣ ಉಪ್ಪೆ, ರಾಜಕುಮಾರ ಎಡವೆ, ಆನಂದ ದ್ಯಾಡೆ ಹಾಗೂ ಅಮರಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.