ADVERTISEMENT

ಖಟಕಚಿಂಚೋಳಿ: ಶಾಲಾಭಿವೃದ್ಧಿಗೆ ಶಿಕ್ಷಕಿಯಿಂದ ₹5 ಸಾವಿರ ದೇಣಿಗೆ

​ಪ್ರಜಾವಾಣಿ ವಾರ್ತೆ
Published 31 ಮೇ 2024, 14:25 IST
Last Updated 31 ಮೇ 2024, 14:25 IST
ಖಟಕಚಿಂಚೋಳಿ ಹೋಬಳಿಯ ಹಾಲಹಳ್ಳಿ(ಕೆ) ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ನಯನಾ ಕಲಬುರ್ಗಿ ಅವರು ಶಾಲಾಭಿವೃದ್ಧಿಗೆ ₹5 ಸಾವಿರ ಹಣ ನೀಡಿದರು
ಖಟಕಚಿಂಚೋಳಿ ಹೋಬಳಿಯ ಹಾಲಹಳ್ಳಿ(ಕೆ) ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ನಯನಾ ಕಲಬುರ್ಗಿ ಅವರು ಶಾಲಾಭಿವೃದ್ಧಿಗೆ ₹5 ಸಾವಿರ ಹಣ ನೀಡಿದರು   

ಖಟಕಚಿಂಚೋಳಿ: ಸಮೀಪದ ಹಾಲಹಳ್ಳಿ(ಕೆ) ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲಾ ಆರಂಭೋತ್ಸವ ಅದ್ಧೂರಿಯಾಗಿ ನಡೆಯಿತು.

ಶಿಕ್ಷಕಿ ನಯನಾ ಕಲಬುರ್ಗಿ ಅವರು, ‘ಶಾಲಾಭಿವೃದ್ಧಿಗಾಗಿ ನಿಮ್ಮ ಯೋಗದಾನ’ ಎಂಬ ಶೀರ್ಷಿಕೆಯಡಿ ತಮ್ಮ ಸ್ವಂತ ಖರ್ಚಿನಲ್ಲಿ ₹5 ಸಾವಿರ ಹಣವನ್ನು ದೇಣಿಗೆ ರೂಪದಲ್ಲಿ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಪ್ಯಾಗೆ ಅವರಿಗೆ ನೀಡಿದರು. ಶಾಲೆಯ ಅಭಿವೃದ್ಧಿಗೆ ಶಿಕ್ಷಕಿ ಮಾಡಿರುವ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಕರಾದ ಸತೀಶಕುಮಾರ, ಸುಮ್ಮಿ ಸುಲ್ತಾನ್, ಶಿಲ್ಪಾ ದೊಡ್ಮನಿ, ವೈಶಾಲಿ ಕುಲಕರ್ಣಿ, ಸುಬೇರಖಾನ್, ವಿವೇಕಾನಂದ ಅರಳಿ, ಯೂಸೂಫ್ ಅಲೀ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.