ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಹತ್ತಿ ಬೆಳೆಯಲ್ಲಿ ರಸ ಹೀರುವ ಕೀಟಗಳ ಬಾಧೆ ಕಂಡು ಬಂದಿದೆ.
ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ತಂಡವು ಬೀದರ್ ತಾಲ್ಲೂಕಿನ ಖಾಜಾಪುರ, ಚಿಮಕೋಡ್, ಚಿಲ್ಲರ್ಗಿ, ಬಸಂತಪುರ, ನಾಗೋರಾ, ಮಾಳೆಗಾಂವ್, ಇಮಾಮಬಾದ್ ಮೊದಲಾದ ಕಡೆಗಳಲ್ಲಿ ನಡೆಸಿದ ಸಮೀಕ್ಷೆ ವೇಳೆ ಹತ್ತಿಯಲ್ಲಿ ರಸ ಹೀರುವ ಕೀಟಗಳು, ಥ್ರಿಪ್ಸ್ ನುಸಿ, ಹಸಿರು ಜಿಗಿ ಹುಳು ಹಾಗೂ ಬಿಳಿ ನೊಣದ ಬಾಧೆ ಪತ್ತೆಯಾಗಿದೆ.
ಕೀಟ ಬಾಧೆ ಕಂಡು ಬಂದಲ್ಲಿ ನಿರ್ವಹಣೆಗಾಗಿ ರೈತರು ಶೇ 5ರ ಬೇವಿನ ಬೀಜದ ಕಶಾಯ ಅಥವಾ ಅಂತರವ್ಯಾಪಿ ಕೀಟನಾಶಕಗಳಾದ ಫ್ಲೋನಿಕಮೈಡ್ 50 ಡಬ್ಲ್ಯೂಜಿ 0.3 ಗ್ರಾಂ ಅಥವಾ ಡೈನೊಟೆಫ್ಯೂರಾನ್ 20 ಎಸ್.ಜಿ ಪ್ರತಿ ಲೀಟರ್ ನೀರಿಗೆ 0.3 ಗ್ರಾಂ ಅಥವಾ 1 ಮಿ.ಲೀ ಫಿಪ್ರೋನಿಲ್ 5 ಎಸ್.ಸಿ ಅಥವಾ ಕ್ಲೋಥೈನಿಡಿನ್ 50 ಡಬ್ಲ್ಯೂಜಿ ಪ್ರತಿ ಲೀಟರ್ ನೀರಿಗೆ 0.075 ಗ್ರಾಂ ಅಥವಾ ಅಸಿಟಾಮಪ್ರಿಡ್ 20 ಎಸ್.ಪಿ. ಪ್ರತಿ ಲೀಟರ್ ನೀರಿಗೆ 0.2 ಗ್ರಾಂ ಅಥವಾ ಥೈಯಾಮಿಥಾಕ್ಸಾಮ್ 25 ಡಬ್ಲ್ಯೂಜಿ ಪ್ರತಿ ಲೀಟರ್ ನೀರಿಗೆ 0.2 ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಪ್ರತಿ ಲೀಟರ್ ನೀರಿಗೆ 0.20 ಮಿ.ಲೀ ಅಥವಾ ಡೈಮಿಥೋಯೇಟ್ 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಿಡಿಸಬೇಕು ಎಂದು ತಂಡದ ನೇತೃತ್ವ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದರು.
ಹತ್ತಿ ಕೆಂಪಾಗುವಿಕೆಗೆ ಮೆಗ್ನೇಶಿಯಂ ಸಲ್ಫೇಟ್ ಪ್ರತಿ ಲೀಟರ್ ನೀರಿಗೆ 10 ಗ್ರಾಂ ಜತೆ 10 ಗ್ರಾಂ 19:19:19: ಸಾ. ರಂ. ಪೋ (ನೀರಿನಲ್ಲಿ ಕರಗುವ ಗೊಬ್ಬರ) ದ್ರಾವಣ ಸಿಂಪರಣೆ ಮಾಡಬೇಕು ಎಂದು ಹೇಳಿದರು.
ತಂಡದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಅಕ್ಷಯಕುಮಾರ, ಮಲ್ಲಿಕಾರ್ಜುನ ಕೊಡಂಬಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.