ADVERTISEMENT

ಬೀದರ್‌: ಜಾಂಬೊರೇಟ್‌ನಲ್ಲಿ ಚಿಣ್ಣರ ಸಾಹಸ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 18:29 IST
Last Updated 9 ಫೆಬ್ರುವರಿ 2024, 18:29 IST
ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಹಗ್ಗಕ್ಕೆ ಜೋತು ಬಿದ್ದು ಸಾಹಸ ಪ್ರದರ್ಶಿಸಿದರು
ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಹಗ್ಗಕ್ಕೆ ಜೋತು ಬಿದ್ದು ಸಾಹಸ ಪ್ರದರ್ಶಿಸಿದರು   

ಬೀದರ್‌: ಕಲ್ಯಾಣ ಕರ್ನಾಟಕ ವಿಭಾಗದ ಮೊದಲ ಜಾಂಬೊರೇಟ್‌ನ ಎರಡನೇ ದಿನ ವಿದ್ಯಾರ್ಥಿಗಳ ಸಾಹಸ ಪ್ರದರ್ಶನಕ್ಕೆ ವೇದಿಕೆಯಾಯಿತು.

ಮೊದಲ ದಿನ ಸ್ಕೌಟ್ಸ್‌ ಮತ್ತು ಗೈಡ್ಸ್‌, ರೇಂಜರ್ಸ್‌, ರೋವರ್ಸ್‌ಗಳು ನಗರದಲ್ಲಿ ಶಿಸ್ತಿನಿಂದ ಜಾಥಾ ನಡೆಸಿ, ಜಾಂಬೊರೇಟ್‌ ವಾತಾವರಣ ಸೃಷ್ಟಿಸಿದ್ದರು. ಎರಡನೇ ದಿನವಾದ ಶುಕ್ರವಾರ ನಗರದ ಶಹಾಪುರ ಗೇಟ್‌ ಸಮೀಪದ ಶಾಹೀನ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಚಿಣ್ಣರ ಸಾಹಸ ಪ್ರದರ್ಶನಗಳು ಗಮನ ಸೆಳೆದವು.

ಹಗ್ಗಕ್ಕೆ ಜೋತು ಬಿದ್ದು ಗುರಿ ತಲುಪುವುದು, ಎತ್ತರದ ಪ್ರದೇಶ ಹತ್ತುವುದು, ಟೈರ್‌ ಒಳಗಿಂದ ಹಾದು ಹೋಗುವುದು, ನೆಲದಡಿ ತೆವಳಿಕೊಂಡು ಹೋಗುವುದು ಸೇರಿದಂತೆ ಇತರೆ ಸಾಹಸ ಪ್ರದರ್ಶನದಲ್ಲಿ ಭಾಗವಹಿಸಿ ಪ್ರತಿಭೆ ತೋರಿಸಿದರು. 

ADVERTISEMENT

ಇದೇ ವೇಳೆ ಇನ್ನೊಂದು ತಂಡವನ್ನು ಶೈಕ್ಷಣಿಕ ಪ್ರವಾಸದ ಭಾಗವಾಗಿ ಪ್ರವಾಸಿ ತಾಣಗಳಿಗೆ ಕರೆದೊಯ್ದು ಅವುಗಳ ಮಹತ್ವ ಸಾರಲಾಯಿತು. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಹೆಚ್ಚಿನ ಮಾಹಿತಿ ಪಡೆದರು.

ಕಲ್ಯಾಣ ಕರ್ನಾಟಕ ಭಾಗದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ 3,500 ವಿದ್ಯಾರ್ಥಿಗಳು ಜಾಂಬೊರೇಟ್‌ನಲ್ಲಿ ಭಾಗವಹಿಸಿದ್ದಾರೆ. ಆಯಾ ಜಿಲ್ಲೆಯವರು ಅವರ ಭಾಗದ ಜಾತ್ರೆ, ಖಾದ್ಯ, ಉಡುಗೆ ತೊಡುಗೆ, ಕಲೆ, ಜಾನಪದ ನೃತ್ಯ, ಸಂಗೀತ, ಸ್ಥಳೀಯ ಭಾಷೆಯ ಮಹತ್ವ ಪರಿಚಯಿಸಿದರು. ಬೆಳಿಗ್ಗೆ ಯೋಗ, ಧ್ಯಾನ ಮಾಡಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಸ್ಕೌಟ್ಸ್‌ ರಾಜ್ಯ ಆಯುಕ್ತ ಎಂ.ಎ.ಖಾಲಿದ್‌, ಬೀದರ್ ಜಿಲ್ಲಾ ಘಟಕದ ಉಪಾಧ್ಯಕ್ಷರೂ ಆದ ಜಾಂಬೊರೇಟ್ ಮುಖ್ಯಸ್ಥ ಅಬ್ದುಲ್ ಖದೀರ್, ಹೆಚ್ಚುವರಿ ಮುಖ್ಯಸ್ಥೆ ಗುರಮ್ಮ ಸಿದ್ಧಾರೆಡ್ಡಿ, ಕಾರ್ಯದರ್ಶಿ ಡಾ. ಎಚ್.ಬಿ.ಭರಶೆಟ್ಟಿ, ಖಜಾಂಚಿ ತೌಸಿಫ್, ಜಾಂಬೊರೇಟ್‌ ಉಸ್ತುವಾರಿ ಮಲ್ಲೇಶ್ವರಿ ಜುಜಾರೆ, ಬಾಬುರಾವ್ ನಿಂಬೂರೆ, ಅನಿಲ್ ಶಾಸ್ತ್ರಿ, ಜಯಶೀಲಾ, ರಮೇಶ ತಿಬಶೆಟ್ಟಿ, ರಾಚಯ್ಯ ನಾಶಿ, ನಾಗರತ್ನ, ಕಲ್ಯಾಣರಾವ ಚಳಕಾಪೂರೆ, ಚಂದ್ರಕಾಂತ ಬೆಳಕುಣಿ ಮತ್ತಿತರರು ಹಾಜರಿದ್ದರು.

ಟೈರ್‌ಗಳ ಮೂಲಕ ಗುರಿ ತಲುಪುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳು
ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಮಿಲಿಟರಿ ಮಾದರಿ ತರಬೇತಿಯಲ್ಲಿ ಪಾಲ್ಗೊಂಡರು
ನೆಲದಡಿ ತೆವಳಿಕೊಂಡು ಹೋಗುವ ಸಾಹಸ ಪ್ರದರ್ಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು -ಪ್ರಜಾವಾಣಿ ಚಿತ್ರಗಳು
ಸಾಂಸ್ಕೃತಿ ಕಾರ್ಯಕ್ರಮ ನಡೆಸಿಕೊಟ್ಟ ವಿದ್ಯಾರ್ಥಿನಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.