ಬೀದರ್: ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ವಿಶ್ವವಿದ್ಯಾಲಯಗಳ ಸ್ನಾತಕ ಹಾಗೂ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಉಚಿತ ತರಬೇತಿ ನೀಡಲು ನಿರ್ಧರಿಸಿದೆ.
ತರಬೇತಿಗಾಗಿ ಅ.26ರಂದು ದೇಶದ 15 ರಾಜ್ಯಗಳ 100 ಕೇಂದ್ರಗಳಲ್ಲಿ ಅರ್ಹತಾ ಪರೀಕ್ಷೆ
ನಡೆಯಲಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಯುಇಟಿ ಉಚಿತ ತರಬೇತಿಯ ಭಿತ್ತಿಪತ್ರ ಬಿಡುಗಡೆಗೊಳಿಸಿದ ಅವರು, 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪಾಸಾದ/ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸ್ನಾತಕ ಹಾಗೂ ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ/ಉತ್ತೀರ್ಣರಾದ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗಳ ತರಬೇತಿಗೆ ಅರ್ಹರು ಎಂದು ಹೇಳಿದರು.
ಶಾಹೀನ್‍ನ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ನವೆಂಬರ್‌ನಿಂದ ಸ್ನಾತಕ ಹಾಗೂ
ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಆನ್‍ಲೈನ್ ತರಬೇತಿ ಆರಂಭವಾಗಲಿದೆ. ಸ್ನಾತಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಆಫ್‍ಲೈನ್ ತರಬೇತಿ ಮಾರ್ಚ್-ಏಪ್ರಿಲ್, ಸ್ನಾತಕೋತ್ತರ ತರಬೇತಿ ಜನವರಿ- ಫೆಬ್ರುವರಿಯಲ್ಲಿ ಶುರುವಾಗಲಿವೆ ಎಂದು ತಿಳಿಸಿದರು.
ಆಫ್‍ಲೈನ್ ತರಬೇತಿ ಊಟ, ವಸತಿ ಸಹಿತ 40 ದಿನಗಳದ್ದಾಗಿರಲಿದೆ. ಆಸಕ್ತರು ಅಕ್ಟೋಬರ್
22ರ ಒಳಗೆ www.shaheengroup.org/cuet ನಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8549897767 ಗೆ ಸಂಪರ್ಕಿಸಬಹುದು ಎಂದು ವಿವರಿಸಿದರು.
ಸಮೂಹದ ತೌಸಿಫ್ ಮಡಿಕೇರಿ, ಪಿ.ಯು. ಕಾಲೇಜು ಪ್ರಾಚಾರ್ಯ ಪ್ರೊ. ಎಸ್.ಎಚ್. ಖಾದ್ರಿ, ಪದವಿ ಕಾಲೇಜು ಪ್ರಾಚಾರ್ಯೆ ಅಫ್ರಾ ನಾಝ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.