ಹುಲಸೂರ: ಬೇಸಿಗೆ ರಜೆ ಕಳೆದು ಶಾಲೆಯತ್ತ ಮುಖ ಮಾಡಿದ ಚಿಣ್ಣರನ್ನು ತಾಲ್ಲೂಕಿನಾದ್ಯಂತ ಶಾಲೆಗಳಲ್ಲಿ ಶುಕ್ರವಾರ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿದರು.
ತಾಲ್ಲೂಕಿನ ಸುತ್ತಲಿನ ಗ್ರಾಮಗಳಾದ ಮಿರಖಲ, ಶ್ರಿಮಾಳಿ, ಗುಂಜರ್ಗಾ, ಮಾನಿಕೇಶ್ವರ, ಹರೆವಾಡಿ, ಕೊಂಗಳಿ, ಅಂಬೇವಾಡಿ, ಮೇಹಕರ, ಹನುಮಂತ ವಾಡಿ, ಕೆಸರ ಜವಳಗಾ, ಕದಿರಾಬಾದ, ತೋಗಲೂರ, ಗೋರಟಾ, ಸಾಯಗಾಂವ ಸೇರಿ ವಿವಿಧ ಗ್ರಾಮಗಳಲ್ಲಿ ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ತಂಡ ಮಕ್ಕಳನ್ನು ಶಾಲೆಗೆ ಸ್ವಾಗತಿಸಿತು.
ಶಾಲಾ ಮುಖ್ಯ ಶಿಕ್ಷಕ ರಾಜಪ್ಪ ನಂದೊಡೆ ಮಾತನಾಡಿ, ‘ಮಕ್ಕಳು ಸರ್ಕಾರಿ ಶಾಲೆಯಲ್ಲಿ ದಾಖಲಾಗಿ ಗುಣಮಟ್ಟದ ಶಿಕ್ಷಣ ಪಡೆದು ಸಮಾಜ ಸುಧಾರಣೆಗೆ ಮುಂದಾಗಬೇಕು. ಸರ್ಕಾರಿ ಶಾಲೆಗಳನ್ನು ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ಸರ್ಕಾರಿ ಶಾಲೆಗಳು ದತ್ತು ಪಡೆದು ಅಭಿವೃದ್ಧಿಗೆ ಸರ್ವತೋಮುಖ ಸಹಕಾರಿಯಾಗಿಲಿದೆ’ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಂಬಾದಾಸ ಮೇತ್ರೆ ಅವರು, ‘ಮಕ್ಕಳಿಗೆ ಹೂಗುಚ್ಛ ಮತ್ತು ಸಿಹಿ ತಿನಿಸು ನೀಡಿ ಸ್ವಾಗತಿಸಿ, ಶಾಲೆಯಲ್ಲಿ ಮೂಲಸೌಲಭ್ಯ ಕಲ್ಪಿಸುವಲ್ಲಿ ಸಮಿತಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸಲು ಮುಂದಾಗಬೇಕು’ ಎಂದರು.
ಪ್ರಸಕ್ತ ಸಾಲಿನ ಶೈಕ್ಷಣಿಕ ಘೋಷ ವಾಕ್ಯವನ್ನು ಮುಖ್ಯ ಶಿಕ್ಷಕ ರಾಜಪ್ಪ ನಂದೊಡೆ ಬೋಧಿಸಿದರು.
ಗ್ರಾ.ಪಂ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಸಂತೋಷ, ಮನೋಜ, ಶ್ರೀದೇವಿ, ಓಂಕಾರ ವಾಂಝರಖೆಡೆ, ಮಹದೇವಪ್ಪ, ಬಾಲಾಜಿ, ವಿಜಯಕುಮಾರ, ಶೈಲಜಾ, ಪ್ರವೀಣ, ಬಿಸಿಯೂಟ ಸಿಬ್ಬಂದಿ ಶ್ರೀದೇವಿ, ಸರಸ್ವತಿ, ರೇಖಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.