ಹುಮನಾಬಾದ್: ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ ಅವರ ಮೇಲಿನ ಹಲ್ಲೆ ಖಂಡಿಸಿ ಕಲ್ಯಾಣ ಕರ್ನಾಟಕ ಸರ್ವ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಮುಖರು ಮಾತನಾಡಿ,‘ಈಚೆಗೆ ರಾಯಚೂರು ನ್ಯಾಯಾಧೀಶರ ವಿರುದ್ಧ ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ನೀಡಲು ಬಂದ ಬಿಎಸ್ಪಿ ಮುಖಂಡರು ಮತ್ತು ಕೆಲ ಕಾರ್ಯಕರ್ತರು ಪೀಠೋಪಕರಣ ಧ್ವಂಸ ಮಾಡಿ, ಕರ್ತವ್ಯನಿರತ ತಹಶೀಲ್ದಾರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ಖಂಡನೀಯ’ ಎಂದು ಹೇಳಿದರು.
ತಹಶೀಲ್ದಾರ್ ಹಾಗೂ ಸಿಬ್ಬಂದಿ ಮೇಲೆ ದಾಖಲಿಸಲಾದ ಸುಳ್ಳು ಜಾತಿ ನಿಂದನೆ ಪ್ರಕರಣ ಹಿಂಪಡೆಯಬೇಕು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಹಾಗೂ ಶಿವಚಂದ್ರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಸಾಗಿತು. ಬಳಿಕ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ ಕಚೇರಿಯ ಶಿರಸ್ತೇದಾರ್ ಕರೀಮ್ ಪಾಷಾ ಅವರಿಗೆ ಸಲ್ಲಿಸಲಾಯಿತು.
ಮಲ್ಲಿಕಾರ್ಜುನ್ ಮಾಶೆಟ್ಟಿ, ಬಾಬುರಾವ್ ಪೋಚಂಪಲಿ, ಸಚಿನ್ ಮಠಪತಿ, ರವಿ ಸ್ವಾಮಿ ನಿರ್ಣಾ, ಮಹೇಶ ಅಗಡಿ, ಮಲ್ಲಿಕಾರ್ಜುನ್ ಸಿಗಿ, ಶ್ರೀನಾಥ್ ದೇವಣಿ, ಗುರು ಸ್ವಾಮಿ ನಿರ್ಣಾ, ಸುನಿಲ್ ಪತ್ರಿ, ಸಿದ್ದು ಹಿರೇಮಠ, ಗೋಪಾಲ್ ಮುಳೆ, ಕಾಶೀನಾಥ್ ಜಕಾ, ರವಿ ಮಾಡಗಿ, ಶಂಕರ್ ಕೋರಿ, ಮಾತೇಶ ಪೂಜಾರಿ, ನಾಗಭೂಷಣ್ ಸಂಗಮ್ಕರ್, ನಾಗೇಶ್ ಕಲ್ಲೂರ್, ವಿಜಕುಮಾರ್ ದುರ್ಗದ, ಸಿಪಿಐಗಳಾದ ಮಲ್ಲಿಕಾರ್ಜುನ ಯಾತನೂರ, ಅಮೂಲ್ ಕಾಳೆ, ರಘುವೀರ ಸಿಂಗ್ ಠಾಕೋರ್, ಗೋಪಾಲ ನಾಯ್ಕ್, ಪಿಎಸ್ಐ ರವಿಕುಮಾರ್, ನಿಂಗಪ್ಪ ಮನ್ನೂರ್, ಸುನೀತಾ, ಕಿರಣಕುಮಾರ, ಬಸವಲಿಂಗ, ಮಹೇಂದ್ರ ಕುಮಾರ್, ಬಸವರಾಜ ಸೇರಿದಂತೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.