ADVERTISEMENT

ಎನ್‍ಎಸ್‍ಎಸ್‍ಕೆ: ನ.7ರಿಂದ ಕಬ್ಬು ನುರಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 13:46 IST
Last Updated 24 ಅಕ್ಟೋಬರ್ 2024, 13:46 IST
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಗುರುವಾರ ಬಾಯ್ಲರ್ ಪ್ರದೀಪನಾ ಪೂಜೆ ನಡೆಯಿತು
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಗುರುವಾರ ಬಾಯ್ಲರ್ ಪ್ರದೀಪನಾ ಪೂಜೆ ನಡೆಯಿತು   

ಜನವಾಡ: ‘ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯು ನವೆಂಬರ್ 7ರಿಂದ ಪ್ರಸಕ್ತ ಸಾಲಿನ ಕಬ್ಬು ನುರಿಕೆ ಹಂಗಾಮು ಆರಂಭಿಸಲಿದೆ’ ಎಂದು ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ್‌ ತಿಳಿಸಿದರು.

ಕಾರ್ಖಾನೆಯಲ್ಲಿ ಗುರುವಾರ ನಡೆದ ಬಾಯ್ಲರ್ ಅಗ್ನಿ ಪ್ರದೀಪನಾ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಾಮಿನಲ್ಲಿ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಉಮಾಕಾಂತ ನಾಗಮಾರಪಳ್ಳಿ, ಕಾರ್ಖಾನೆ ಉಪಾಧ್ಯಕ್ಷ ಬಾಲಾಜಿ ಚೌಹಾಣ್, ನಿರ್ದೇಶಕರಾದ ರಾಜಕುಮಾರ ಕರಂಜಿ, ಶಿವಬಸಪ್ಪ ಚೆನ್ನಮಲ್ಲೆ, ಸಿದ್ರಾಮ ವಾಘಮಾರೆ, ಸಂಗಮೇಶ ಪಾಟೀಲ, ಸೀತಾರಾಮ ಖೇಮಾ, ಶೋಭಾವತಿ ಪಾಟೀಲ, ಮಲ್ಲಮ್ಮ ಪಾಟೀಲ, ವೀರಶೆಟ್ಟಿ ಪಟ್ನೆ, ನಾಗರೆಡ್ಡಿ ಯಾಚೆ, ಕಾನೂನು ಸಲಹೆಗಾರ ಬಿ.ಎಸ್. ಅಪರಂಜಿ, ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ ಪಾಟೀಲ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.