ಔರಾದ್: ತಾಲ್ಲೂಕಿನ ಸುಂದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಬಿ.ಇಡಿ ಪದವೀಧರರೊಬ್ಬರು ಅಲಂಕರಿಸಿದ್ದಾರೆ.
ಜಕನಾಳ ಗ್ರಾಮದ ಪ್ರಿಯಾಂಕಾ ರಾವುಸಾಬ್ ಪಾಟೀಲ ಮಂಗಳವಾರ ನಡೆದ ಚುನಾವಣೆಯಲ್ಲಿ 20 ಸದಸ್ಯರ ಪೈಕಿ 12 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ರಾಚಮ್ಮ ಶೆಟಕಾರ ಏಳು ಸದಸ್ಯರ ಬೆಂಬಲ ಪಡೆದರೆ ಒಂದು ಮತ ಅಸಿಂಧುಗೊಂಡಿದೆ. ತಾಲ್ಲೂಕು ಪಂಚಾಯಿತಿ ಇಒ ಬೀರೇಂದ್ರಸಿಂಗ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಸುಂದಾಳ ಗ್ರಾಮ ಪಂಚಾಯಿತಿಯ ಈ ಹಿಂದಿನ ಅಧ್ಯಕ್ಷೆ ಶ್ರೀದೇವಿ ರಾಜೀನಾಮೆ ಕೊಟ್ಟಿರುವುದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ. ಈಗ ಆಯ್ಕೆಯಾದ ನೂತನ ಅಧ್ಯಕ್ಷೆ ಪ್ರಿಯಾಂಕಾ ಅವರ ಅಧಿಕಾರಾವಧಿ 15 ತಿಂಗಳ ಇರಲಿದೆ.
‘ಸದಸ್ಯರು ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿದ್ದಾರೆ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ನಾನು ಪದವೀಧರೆ ಆಗಿರುವುದರಿಂದ ಆಡಳಿತದಲ್ಲೂ ಸ್ವಲ್ಪ ತಿಳವಳಿಕೆ ಇದೆ. ಹೀಗಾಗಿ ಗ್ರಾಮಗಳ ಮೂಲ ಸೌಲಭ್ಯ ಸೇರಿ ಅಗತ್ಯ ಕೆಲಸ–ಕಾರ್ಯಗಳನ್ನು ಆದ್ಯತೆ ಮೇಲೆ ಮಾಡುವುದಾಗಿ’ ನೂತನ ಅಧ್ಯಕ್ಷೆ ಪ್ರಿಯಾಂಕ ಹೇಳಿದರು.
ದೇವರಿಗೆ ಪೂಜೆ: ಬಿಜೆಪಿ ಕಾರ್ಯಕರ್ತರು ನೂತನ ಅಧ್ಯಕ್ಷರೊಂದಿಗೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ತರಳಿ ಪೂಜೆ ಸಲ್ಲಿಸಿದರು. ರಾವುಸಾಬ್ ಪಾಟೀಲ, ದಯಾನಂದ ಹಳ್ಳಿಖೇಡೆ, ಶರಣಬಸಪ್ಪ ಪಾಟೀಲ, ಬಾಬುರಾವ ಸಿಂಗೋಡೆ, ರವೀಂದ್ರರೆಡ್ಡಿ, ಮಾರುತಿರೆಡ್ಡಿ, ಗುರುನಾಥ ಲಕ್ಕಾ, ಗುರುನಾಥ ಪಾಟೀಲ, ಜಗದೀಶ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.