ADVERTISEMENT

ಹುಲಸೂರ: ಜಾಲತಾಣದಲ್ಲಿ ಮತ ಹಾಕಿದ ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 7 ಮೇ 2024, 15:49 IST
Last Updated 7 ಮೇ 2024, 15:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹುಲಸೂರ: ತಾಲ್ಲೂಕಿನ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತ ಹಾಕುವುದನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಮತದಾರೊಬ್ಬರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೊದಲು ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಹೆಸರಿನ ಮುಂದೆ ಬೆರಳು ತೋರಿಸುವ ಮತದಾರ ಬಳಿಕ ಭಗವಂತ ಖೂಬಾ ಹೆಸರಿನ ಮುಂದಿರುವ ಬಟನ್ ಒತ್ತಿ ಮತ ಚಲಾಯಿಸುವ ದೃಶ್ಯ ವಿಡಿಯೊದಲ್ಲಿದೆ. ಇನ್‌ಸ್ಟಾಗ್ರಾಂ ಸೇರಿ ವಾಟ್ಸಪ್‌ನಲ್ಲಿ ಅಭ್ಯರ್ಥಿಗಳ ವಿಡಿಯೊ ಹರಿದಾಡುತ್ತಿದೆ.

ADVERTISEMENT

ಮತಗಟ್ಟೆಯೊಳಗೆ ಫೋನ್ ತೆಗೆದುಕೊಂಡು ಹೋಗುವುದಕ್ಕೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದರೂ ಮತದಾರ ಹೇಗೆ ಫೋನ್‌ ಕೊಂಡೊಯ್ದರು ಮತ್ತು ಚತ್ರೀಕರಿಸಿಕೊಂಡರು ಎಂಬ ಬಗ್ಗೆ ಚರ್ಚೆ ನಡೆದಿದೆ. ವಿಡಿಯೊ ಸೆರೆ ಹಿಡಿದು, ಜಾಲತಾಣದಲ್ಲಿ ಹಂಚಿಕೊಂಡ ಮತದಾರ ಯಾರು ಮತ್ತು ಇದು ಯಾವ ಮತಗಟ್ಟೆಯಲ್ಲಿ ನಡೆದಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.