ಕಮಲನಗರ: ‘ಸುಮಾರು ವರ್ಷಗಳ ಇತಿಹಾಸ ಹೊಂದಿರುವ, 12ನೇ ಶತಮಾನದ ಶಿವಶರಣ ಮಡಿವಾಳ ಮಾಚಿದೇವರ ಕಾಯಕಪ್ರಿಯರಾದ ನಾವು ಅಂದಿನಿಂದ ಇಂದಿನವರೆಗೆ ನಮ್ಮ ಕುಲಕಸುಬು ಮಾಡುತ್ತಿದ್ದೇವೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಕೈಗಾರೀಕರಣದ ಪ್ರಭಾವದಿಂದ ಅನೇಕ ಕೈಕಸುಬುಗಳು ನೆಲಕಚ್ಚಿವೆ.
‘ನಾವುಗಳು ಪರಂಪರೆಯಿಂದ ನಮ್ಮ ಮನೆತನದ ಕೆಲಸವಾದ ಮಡಿವಾಳ ಕೆಲಸ ಮಾಡುತ್ತಿದ್ದೆವು. ಜೊತೆಗೆ ಗ್ರಾಮದ ರೈತರು ಬೆಳೆದಂತಹ ಬೆಳೆಗಳನ್ನು ನಮ್ಮ ಕತ್ತೆಗಳ ಮೇಲೆ ಮನೆಗಳಿಗೆ ತರುತ್ತಿದ್ದೆವು. ಆಗ ಕತ್ತೆಯ ಮೇಲಿನ ಭಾರಕ್ಕೆ ಅನುಗುಣವಾಗಿ ಬೆಳೆದ ಧಾನ್ಯಗಳನ್ನು ನಮಗೆ ಕೊಡುತ್ತಿದ್ದರು. ಅಲ್ಲದೆ ರೈತರ ಬೆಳೆಗಳನ್ನು ದೂರದ ಮಾರುಕಟ್ಟೆಗೂ ನಮ್ಮ ಕತ್ತೆಗಳ ಮೇಲೆ ಸಾಗಿಸುತ್ತಿದ್ದೆವು. ಆದರೇ ಈಗಿನ ಕಾಲದಲ್ಲಿ ಶ್ರೀಮಂತರು ಬಟ್ಟೆ ಒಗೆಯುವ ಮಷಿನ್ ತಂದಿದ್ದಾರೆ. ರೈತರು ಹೊಲಗಳಲ್ಲಿನ ದವಸ ಧಾನ್ಯಗಳನ್ನು ಟ್ರ್ಯಾಕ್ಟರ್ ಮುಖಾಂತರ ಸಾಗಾಣಿಕೆ ಮಾಡುತ್ತಿದ್ದಾರೆ. ನಮ್ಮ ಸರಕು ಸಾಗಾಟ ಕೂಡ ನಿಂತಿದೆ. ಇದರಿಂದ ನಮ್ಮ ಜೀವನ ಅತಂತ್ರವಾಗಿದೆ’ ಎಂದು ಕಮಲನಗರ ನಿವಾಸಿ ವೈಜಿನಾಥ ತೇಲಂಗ (ಪರಿಟ ) ತಮ್ಮ ಅಳಲು ತೋಡಿಕೊಂಡರು.
‘ಇಂದಿನ ಕಾಲದಲ್ಲಿ ಅನೇಕ ಕಾಲ್ನಡಿಗೆಯ ಸರಕು ಸಾಗಣೆಗಳು ಮಾಯವಾಗುತ್ತಿವೆ. ಹೀಗಾಗಿ ಕೆಲವು ಸಮಾಜದ ಕುಟುಂಬಗಳು ಮಡಿವಾಳರ ಕುಟುಂಬಗಳಿಗೆ ಸರ್ಕಾರದ ಸೌಲಭ್ಯ ಒದಗಿಸಬೇಕು’ ಎಂದರು.
ನಾವು ಚಿಕ್ಕವರಿದ್ದಾಗ ಒಂದು ಕತ್ತೆಯ ಬೆಲೆ ಮೂರ್ನಾಲ್ಕು ಸಾವಿರ ಇತ್ತು. ಇವಾಗ ಒಂದು ಕತ್ತೆ ಖರೀದಿಸಬೇಕು ಎಂದರೆ ₹25 ರಿಂದ 30 ಸಾವಿರ ಬೆಲೆ ಇದೆ. ನಮ್ಮಲ್ಲಿ 11 ಕತ್ತೆಗಳಿದ್ದವು. ಕೆಲವು ರೋಗಗಳು ಬರುತ್ತಿವೆ. ಅದಕ್ಕಾಗಿ ಒಂದು ವಾರದ ಹಿಂದೆ ಒಂದು ಕತ್ತೆ ಮರಣ ಹೊಂದಿದೆ. ನಾವು ಬಡವರು ಆಗಿದ್ದೇವೆ ಕತ್ತೆ ಖರೀದಿಸಲು ಸಹ ಅಸಹಾಯಕರಾಗಿದ್ದೇವೆ’ ಎಂದು ಮಹಾದೇವ ವೈಜನಾಥ ತೇಲಂಗ (ಪರಿಟ) ತಮ್ಮ ಕಷ್ಟ ಹೇಳಿಕೊಂಡರು.
ಕೇಂದ್ರ ಸರ್ಕಾರದ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಅನೇಕ ಸೌಲಭ್ಯಗಳನ್ನು ಎಲ್ಲರಿಗೆ ದೊರೆಯುವಂತೆ ಸಹಾಯ ಮಾಡಲಾಗುವುದುಮಾಣಿಕರಾವ ಪಾಟೀಲ್ ಕಮಲನಗರ ತಾ.ಪಂ.ಇಒ
ಅಸಂಘಟಿತ ಕಾರ್ಮಿಕರಿಗೆ ಇಲಾಖೆಯಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಸೌಲಭ್ಯಗಳಿವೆ. ಇದರ ಸದುಪಯೋಗ ಪಡೆದುಕೊಳ್ಳಲು ನಾವು ಸಹಾಯ ಮಾಡುತ್ತೇವೆರಾಹುಲ್ ರತ್ನಾಕರ ಕಾರ್ಮಿಕ ಇಲಾಖೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.