ಹುಲಸೂರ: 20 ವರ್ಷಗಳ ನಿರಂತರ ಹೋರಾಟದ ಬಳಿಕ ಸರ್ಕಾರ ಹುಲಸೂರ ತಾಲ್ಲೂಕು ಘೋಷಣೆ ಮಾಡಿತು. ಆದರೆ ಕನಿಷ್ಠ ಸೌಕರ್ಯಗಳನ್ನೂ ಒದಗಿಸಲಿಲ್ಲ. ಆದ್ದರಿಂದ ಇದು ಹೆಸರಿಗೆ ಮಾತ್ರ ತಾಲ್ಲೂಕಾಗಿದೆ.
2000ರಲ್ಲಿ ಹುಲಸೂರ ತಾಲ್ಲೂಕು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಹೋರಾಟ ಮಾಡುವ ಮೂಲಕ ಸರ್ಕಾರ ಕ್ಕೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ರಚಿಸುವ ಸಂಬಂಧ ಅಧ್ಯಯನ ಮಾಡಲು ಸರ್ಕಾರ ಆಯೋಗವನ್ನು ರಚಿಸಿತು. ಬಳಿಕಆಯೋಗ ವರದಿ ನೀಡಿತು. ಆ ವರದಿ ಅನ್ವಯ ನಾಲ್ಕು ವರ್ಷಗಳ ಹಿಂದೆ ತಾಲ್ಲೂಕು ಘೋಷಣೆ ಮಾಡಲಾಯಿತು. ಇದಕ್ಕೆ ಕೇವಲ 18 ಗ್ರಾಮಗಳನ್ನು ಮಾತ್ರ ಸೇರಿಸಿತು.
ಸರ್ಕಾರ ಇಲ್ಲಿ ತಹಶೀಲ್ ಕಚೇರಿಯನ್ನು ಮಾತ್ರ ಆರಂಭಿಸಿದೆ. ಅದರಲ್ಲೂ ಸೌಲಭ್ಯಗಳಿಲ್ಲ. ಆದ್ದರಿಂದ ಇಂದಿಗೂ ಬಹುತೇ ಕರು ಕೆಲಸಗಳಿಗಾಗಿ ಬಸವಕಲ್ಯಾಣಕ್ಕೆ ಅಲೆದಾಡುತ್ತಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಕಟ್ಟಡ ಇಲ್ಲ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಚಿಕ್ಕ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸುವ ಕೆಲಸ ಮಾಡಬೇಕಿದೆ.
ಮಿನಿ ವಿಧಾನಸೌಧ ನಿರ್ಮಾಣಕ್ಕೆ ವ್ಯಕ್ತಿಯೊಬ್ಬರು 8 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ. ಆದರೆ, ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿಲ್ಲ.
30 ವರ್ಷಗಳ ಹಿಂದೆ ನಿರ್ಮಿಸಲಾದ ಬಸ್ ನಿಲ್ದಾಣದ ಕಟ್ಟಡ ಶಿಥಿಲಾವಸ್ಥೆ ತಲುಪಿದೆ.ಆದರೂ ಸರ್ಕಾರ ಬಸ್‌ನಿಲ್ದಾಣ ನಿರ್ಮಾಣಕ್ಕೆಮುಂದಾಗುತ್ತಿಲ್ಲ. ಜನರು ಬಸ್‌ಗಳಿಗಾಗಿ ರಸ್ತೆ ಬದಿ ನಿಂತು ಕಾಯಬೇಕಾದ ಸ್ಥಿತಿ ಇದೆ.
ತಾಲ್ಲೂಕಿನಲ್ಲಿ ಉತ್ತಮವಾದ ರಸ್ತೆಗಳಿಲ್ಲ. ಉತ್ತಮ ರಸ್ತೆ ನಿರ್ಮಾಣ ಮಾಡುವಂತೆ ಹಲವು ಸಂಘಟನೆಗಳ ಮುಖಂಡರು ಹೋರಾಟ ಮಾಡಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನುತ್ತಾರೆ ಜನ.
ಕೂಡಲೇ ಸರ್ಕಾರ ಹುಲಸೂರಿನಲ್ಲಿ ವಿವಿಧ ಇಲಾಖೆಗಳ ಕಚೇರಿಗಳನ್ನು ಆರಂಭಿಸಬೇಕು. ಮೂಲ ಸೌಕರ್ಯ ಒದಗಿಸಬೇಕು ಎಂದು ಜನ ಆಗ್ರಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.