ADVERTISEMENT

ಗುದಗೆ ಆಸ್ಪತ್ರೆಯಲ್ಲಿ ಬಂಜೆತನ ಮುಕ್ತಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 15:19 IST
Last Updated 25 ಜನವರಿ 2021, 15:19 IST
ಡಾ. ಶಾರದಾ ಗುದಗೆ
ಡಾ. ಶಾರದಾ ಗುದಗೆ   

ಬೀದರ್: ಇಲ್ಲಿಯ ಗುದಗೆ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಬಂಜೆತನ ಮುಕ್ತಿ (ಐವಿಎಫ್) ಚಿಕಿತ್ಸೆಯನ್ನೂ ಒದಗಿಸಲಿದೆ ಎಂದು ಆಸ್ಪತ್ರೆಯ ಸ್ತ್ರೀರೋಗ ತಜ್ಞರ ವಿಭಾಗದ ಮುಖ್ಯಸ್ಥೆ ಡಾ. ಶಾರದಾ ಸಚಿನ್ ಗುದಗೆ ತಿಳಿಸಿದರು.

ಬಂಜೆತನ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯ ರೋಗಿಗಳು ಹೈದರಾಬಾದ್, ಲಾತೂರ್, ಸೊಲ್ಲಾಪುರ, ಔರಂಗಾಬಾದ್, ಪುಣೆ ಹಾಗೂ ಮುಂಬೈಗೆ ಹೋಗುವುದನ್ನು ತಪ್ಪಿಸಲು ಆಸ್ಪತ್ರೆಯ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್‌ನಲ್ಲಿ ಪುಣೆಯ ರೆಮೊಂಟಂಟ್ ಕನ್ಸಲ್ಟಿಂಗ್ ಸಂಸ್ಥೆ ಸಹಯೋಗದಲ್ಲಿ ಐ.ವಿ.ಎಫ್. ಚಿಕಿತ್ಸೆ ನೀಡಲು ಆಸ್ಪತ್ರೆ ಸಿದ್ಧವಾಗಿದೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈವರೆಗೆ ಸುಮಾರು ಆರು ಸಾವಿರ ಜನರಿಗೆ ಬಂಜೆತನಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡಲಾಗಿದೆ. ಈಗ ಪ್ರತಿ ವರ್ಷ ಐದಾರು ಕಡು ಬಡ ದಂಪತಿಗೆ ಐವಿಎಫ್ ಚಿಕಿತ್ಸೆ ಉಚಿತವಾಗಿ ಕೊಡಲಾಗುವುದು. ಜಿಲ್ಲೆಯ ರೋಗಿಗಳು ಐವಿಎಫ್ ಚಿಕಿತ್ಸೆಯ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಚಂದ್ರಕಾಂತ ಗುದಗೆ, ರೆಮೊಂಟಂಟ್ ಕನ್ಸಲ್ಟಿಂಗ್ ಸಂಸ್ಥೆಯ ಮುಖ್ಯಸ್ಥ ಡಾ. ಮಧುರ ಹಮಿನೆ, ತಾಂತ್ರಿಕ ಅಧಿಕಾರಿ ಅನಿರುದ್ಧ ಆಚಾರ್ಯ, ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಸಚಿನ್ ಗುದಗೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.