ADVERTISEMENT

ಬೀದರ್‌: ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 16:11 IST
Last Updated 28 ನವೆಂಬರ್ 2023, 16:11 IST
ಬೀದರ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನುವಾದಕಿ ಶುಭಾ ದೊಟಿಹಾಳ್ ಮಾತನಾಡಿದರು
ಬೀದರ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನುವಾದಕಿ ಶುಭಾ ದೊಟಿಹಾಳ್ ಮಾತನಾಡಿದರು   

ಬೀದರ್‌: ಎರಡು ದಿನಗಳ ಜಿಲ್ಲಾಮಟ್ಟದ ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶಕ್ಕೆ ನಗರದಲ್ಲಿ ಮಂಗಳವಾರ ತೆರೆ ಬಿತ್ತು.

ಅನುವಾದಕಿ ಶುಭಾ ದೊಟಿಹಾಳ್ ಮಾತನಾಡಿ,‘ಸಂಸ್ಕೃತಿಯನ್ನು ಉಳಿಸುವಲ್ಲಿ ತಾಯಿಯ ಪಾತ್ರ ಮಹತ್ವವಾದುದು. ಪ್ರಸ್ತುತ ಸಮಾಜದಲ್ಲಿ ಸೀತೆ, ಊರ್ಮಿಳೆ ಹಾಗೂ ಮಾಂಡಲಿ ಅವರಂಥ ಮಹಿಳೆಯರ ಅವಶ್ಯಕತೆ ಇದೆ’ ಎಂದು ಹೇಳಿದರು.

ಪ್ರತಿಯೊಬ್ಬ ಪುರುಷರಲ್ಲಿ ಸಂಸ್ಕೃತಿ ಬೆಳೆಸುವ ಮಹತ್ವದ ಜವಾಬ್ದಾರಿ ಮಹಿಳೆಯರು ಹೊತ್ತುಕೊಳ್ಳಬೇಕು. ತಾಳ್ಮೆಯ ಪ್ರತೀಕವಾದ ಶಾರದಾ ಮಾತೆಯ ಉದಾಹರಣೆಯೊಂದಿಗೆ ಮಹಿಳೆಯರು ತಾಳ್ಮೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಜಯಶ್ರೀ ಪ್ರಭಾ,‘ಮಹಿಳೆಯರು ಪ್ರಬಲರಾಗಬೇಕು. ಸಮಾಜದಲ್ಲಿ ನಡೆಯುವ ಮಹಿಳಾ ದೌರ್ಜನ್ಯಗಳ ವಿರುದ್ಧ ಗುಡುಗಬೇಕು’ ಎಂದು ತಿಳಿಸಿದರು.

ನಾಟಿ ವೈದ್ಯೆ ಮಂಗಳಾಬಾಯಿ ಸಿದ್ರಾಮಪ್ಪಾ ಮಡಿವಾಳ ಅವರಿಗೆ ಸೇವಾ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಮಾರುತಿರಾವ ಪಂಚಭಾಯಿ, ಶೀಲಾ ಖೂಬಾ, ನೀತು ಬೆಲ್ದಾಳೆ, ಸುಷ್ಮಾ ಪಾಟೀಲ, ಅರುಣಾ ರವಿಸ್ವಾಮಿ, ಪುಣ್ಯವತಿ ವಿಸಾಜಿ, ಜಯಶ್ರೀ ಮಣಗೆ, ರತ್ನಾ ಪಾಟೀಲ, ಭಗಿನಿ ದಾನೇಶ್ವರಿ ಮಡಿವಾಳ, ಅರ್ಚನಾ ಸಿರಗೆರೆ ಹಾಗೂ ಶ್ರೇಯಾ ಮಹೇಂದ್ರಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.