ADVERTISEMENT

ಜನವಾಡ | ಉಡಾನ್ ಉತ್ಸವ: ಗಮನ ಸೆಳೆದ ಮಾದರಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 14:16 IST
Last Updated 12 ಡಿಸೆಂಬರ್ 2023, 14:16 IST
ಬೀದರ್ ತಾಲ್ಲೂಕಿನ ಚೊಂಡಿ ಗ್ರಾಮದ ಹನಿ ಬೀಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನೂತನ ಕಟ್ಟಡದಲ್ಲಿ ನಡೆದ ಉಡಾನ್ ಉತ್ಸವದಲ್ಲಿ ಮಕ್ಕಳು ತಯಾರಿಸಿದ ವಿವಿಧ ಮಾದರಿಗಳು ಗಮನ ಸೆಳೆದವು
ಬೀದರ್ ತಾಲ್ಲೂಕಿನ ಚೊಂಡಿ ಗ್ರಾಮದ ಹನಿ ಬೀಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನೂತನ ಕಟ್ಟಡದಲ್ಲಿ ನಡೆದ ಉಡಾನ್ ಉತ್ಸವದಲ್ಲಿ ಮಕ್ಕಳು ತಯಾರಿಸಿದ ವಿವಿಧ ಮಾದರಿಗಳು ಗಮನ ಸೆಳೆದವು   

ಜನವಾಡ: ಬೀದರ್ ತಾಲ್ಲೂಕಿನ ಚೊಂಡಿ ಗ್ರಾಮದ ಹನಿ ಬೀಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನೂತನ ಕಟ್ಟಡದಲ್ಲಿ ಸೋಮವಾರ ‘ಉಡಾನ್ ಉತ್ಸವ’ ಶೀರ್ಷಿಕೆಯಡಿ ವಸ್ತು ಪ್ರದರ್ಶನ ನಡೆಯಿತು.

1ರಿಂದ 8ನೇ ತರಗತಿ ವರೆಗಿನ ಮಕ್ಕಳು ಸ್ವತಃ ಸಿದ್ಧಪಡಿಸಿದ ವಿಜ್ಞಾನ, ಗಣಿತ, ಕನ್ನಡ, ಇಂಗ್ಲಿಷ್ ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾದರಿಗಳು ಎಲ್ಲರ ಗಮನ ಸೆಳೆದವು.

ಡಯಟ್ ಪ್ರಾಚಾರ್ಯ ಮಹಮ್ಮದ್ ಗುಲ್ಶನ್, ಪಿಡಿಒ ಶರತ್ ಅಭಿಮನ್ಯು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ಯೋಜನಾ ಅಧಿಕಾರಿ ಗೋಪಾಲರಾವ್ ಪಡವಳಕರ್, ಸಮೂಹ ಸಂಪನ್ಮೂಲ ಅಧಿಕಾರಿ ಶ್ರೀದೇವಿ ಹೂಗಾರ, ನಿರಂತರ ಫೌಂಡೇಷನ್ ವ್ಯವಸ್ಥಾಪಕ ನಿರಂಜನ ಶೀಲವಂತ, ಶಾಲೆಯ ಪ್ರಾಚಾರ್ಯೆ ಲಕ್ಷ್ಮಿ ಮುಗಳಿ, ಪ್ರೀತಿ ಖೇಣಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.