ADVERTISEMENT

‘ವಚನ ದರ್ಶನ’ ಕೃತಿಯಿಂದ ಬಸವಣ್ಣನವರಿಗೆ ಅಪಚಾರ: ಸಾಣೆಹಳ್ಳಿ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 6:54 IST
Last Updated 12 ಅಕ್ಟೋಬರ್ 2024, 6:54 IST
<div class="paragraphs"><p>ಅಂತರರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಶುಕ್ರವಾರ ರಾತ್ರಿ ನಗರದಲ್ಲಿ ಏರ್ಪಡಿಸಿದ್ದ ಶರಣ ವಿಜಯೋತ್ಸವ ಮತ್ತು ನಾಡ ಹಬ್ಬದಲ್ಲಿ ಭಾಗವಹಿಸಿದ&nbsp;ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ</p></div>

ಅಂತರರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಶುಕ್ರವಾರ ರಾತ್ರಿ ನಗರದಲ್ಲಿ ಏರ್ಪಡಿಸಿದ್ದ ಶರಣ ವಿಜಯೋತ್ಸವ ಮತ್ತು ನಾಡ ಹಬ್ಬದಲ್ಲಿ ಭಾಗವಹಿಸಿದ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

   

ಬಸವಕಲ್ಯಾಣ (ಬೀದರ್‌ ಜಿಲ್ಲೆ): ‘ಇತ್ತೀಚೆಗೆ ಪ್ರಕಟಗೊಂಡ ‘ವಚನ ದರ್ಶನ’ ಸಂಪಾದನಾ ಕೃತಿಯಲ್ಲಿ ವಚನಗಳ ಮರು ವಿಶ್ಲೇಷಣೆ ನೆಪದಲ್ಲಿ ಬಸವಣ್ಣನವರನ್ನು ಭಕ್ತಿಯ ಭಾವುಕರನ್ನಾಗಿ ಚಿತ್ರಿಸಿ ಸನಾತನ ಪರಂಪರೆಯಿಂದ ಪ್ರೇರಣೆ ಪಡೆದರೆಂದು ಉಲ್ಲೇಖಿಸಿ ಅಪಚಾರ ಎಸಗಲಾಗಿದೆ' ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅಂತರರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಶುಕ್ರವಾರ ರಾತ್ರಿ ನಗರದಲ್ಲಿ ಏರ್ಪಡಿಸಿದ್ದ ಶರಣ ವಿಜಯೋತ್ಸವ ಮತ್ತು ನಾಡ ಹಬ್ಬದಲ್ಲಿ ‘ಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ADVERTISEMENT

'ಈ ಗ್ರಂಥದಲ್ಲಿ ಬಸವಣ್ಣನವರಿಗೆ ಬೇರೆ ರೂಪ ಕೊಡುವ ಹುನ್ನಾರ ನಡೆದಿದೆ. ಅವರು ವೇದಾಗಮ ವಿರೋಧಿಸಿ ಬರೆದ ಒಂದೂ ವಚನ ಅದರಲ್ಲಿಲ್ಲ. ತಮಗೆ ಬೇಕಾದ ಹಾಗೆ ಸತ್ಯ‌ ಬದಲಾವಣೆ ಮಾಡಲಾಗಿದೆ. ಬುದ್ಧಿ ಸುಬುದ್ಧಿ ಆಗಬೇಕು. ನರಿಬುದ್ಧಿ ಆಗಬಾರದು. ಶರಣ ಶಕ್ತಿ ಚಲನಚಿತ್ರದ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ' ಎಂದರು.

ಲಿಂಗಾಯತ ಮಠಾಧೀಶರ‌ ಒಕ್ಕೂಟದ ರಾಜ್ಯ ಅಧ್ಯಕ್ಷರೂ ಆಗಿರುವ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಭಾಲ್ಕಿ ‌ಬಸವಲಿಂಗ ಪಟ್ಟದ್ದೆವರು ಮಾತನಾಡಿ, 'ತತ್ವಕ್ಕೆ ‌ಚ್ಯುತಿ ಬಂದಾಗ ಲಿಂಗಾಯತರು ಎದ್ದು ನಿಲ್ಲಬೇಕು. ಸಾಣೆಹಳ್ಳಿ ಸ್ವಾಮೀಜಿಯವರು ಅನ್ಯರನ್ನು ಟೀಕಿಸಲಿಲ್ಲ. ಆದರೆ, ಗಣಪತಿ ಬಗ್ಗೆ ಉಲ್ಲೇಖಿಸಿ ನಮ್ಮ ತತ್ವ ಹೀಗಿದೆ ಎಂದರೇನೆ ಕೆಲವರು ವಿರೋಧಿಸಿದರು' ಎಂದರು.

ಶಾಸಕ ಶರಣು ಸಲಗರ, ವಿಧಾನಪರಿಷತ್ ಸದಸ್ಯ ಎಂ.ಜಿ.ಮುಳೆ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ದಯಾನಂದ ಅಗಸರ, ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಸಮಿತಿ ಉಪಾಧ್ಯಕ್ಷ ಬಸವರಾಜ ಧನ್ನೂರ್, ಪ್ರೊ.ಕಲ್ಯಾಣರಾವ್ ಪಾಟೀಲ, ನಿವೃತ್ತ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.