ADVERTISEMENT

ಬೀದರ್ | ಸಂಭ್ರಮದ ವಿಜಯದಶಮಿ: ರಾವಣನ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 17:09 IST
Last Updated 12 ಅಕ್ಟೋಬರ್ 2024, 17:09 IST
<div class="paragraphs"><p>ರಾವಣನ ಪ್ರತಿಕೃತಿ ದಹನ</p></div>

ರಾವಣನ ಪ್ರತಿಕೃತಿ ದಹನ

   

ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ

ಬೀದರ್: ಶ್ರೀರಾಮಲೀಲಾ ಸೇವಾ ಸಮಿತಿಯಿಂದ ವಿಜಯದಶಮಿ ಅಂಗವಾಗಿ ನಗರದ ಸಾಯಿ ಶಾಲೆಯ ಮೈದಾನದಲ್ಲಿ ಶನಿವಾರ ರಾತ್ರಿ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ADVERTISEMENT

40 ಅಡಿ ಎತ್ತರದ ರಾವಣನ ಪ್ರತಿಕೃತಿಗೆ ಬಾಣದಿಂದ ಬೆಂಕಿ ಹೊತ್ತ ಬಿಲ್ಲನ್ನು ಬಿಟ್ಟು ದಹಿಸಲಾಯಿತು. ಎತ್ತರದ ಪ್ರತಿಕೃತಿಯೂ ಪಟಾಕಿಗಳೊಂದಿಗೆ ದಹನಗೊಂಡಿತು. ಜನ ಅದನ್ನು ನೋಡಿ ಸಂಭ್ರಮಿಸಿದರು. ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡರು. ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯ ಜನ ಆಗಮಿಸಿದ್ದರು.

ಪ್ರತಿಕೃತಿ ದಹನಕ್ಕೂ ಮುನ್ನ ರಾಮಲೀಲಾ ನಾಟಕ ಪ್ರಸ್ತುತ ಪಡಿಸಲಾಯಿತು. ಇದು ಜನರನ್ನು ಮಂತ್ರಮುಗ್ಧಗೊಳಿಸಿತು. ಇಡೀ ಸಾಯಿ ಶಾಲೆಯ ಮೈದಾನ, ಮುಖ್ಯರಸ್ತೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಬಿಜೆಪಿ ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ಬಾಬುವಾಲಿ, ಗುರುನಾಥ ಕೊಳ್ಳೂರು, ಮುಖಂಡರಾದ ಬಸವರಾಜ ಅಷ್ಟೂರ್, ರಾಜಶೇಖರ ನಾಗಮೂರ್ತಿ, ಮಹೇಶ್ವರ ಸ್ವಾಮಿ, ಚಂದ್ರಶೇಖರ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.

ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿಜಯದಶಮಿ ಸಂಭ್ರಮ ಮನೆ ಮಾಡಿತ್ತು. ಊರ ಕಮಾನು, ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ಅನ್ನದಾಸೋಹ ಮಾಡಲಾಯಿತು. ಎಲ್ಲೆಡೆ ಸಡಗರ, ಸಮಭ್ರಮದ ವಾತಾವರಣ ಇತ್ತು. ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.