ADVERTISEMENT

ವಿವೇಕವಾಣಿಯಿಂದ ಜೀವನೋತ್ಸಾಹ ಹೆಚ್ಚುತ್ತದೆ: ಸುರೇಶ್‌ ಚೌದ್ರಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 15:36 IST
Last Updated 12 ಜನವರಿ 2024, 15:36 IST
ಚಿಟಗುಪ್ಪ ಪಟ್ಟಣದ ಜ್ಞಾನಗಂಗಾ ಪ್ರೌಢಶಾಲೆ, ಪಿಯುಸಿ ಕಾಲೇಜು ಆಶ್ರಯದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು
ಚಿಟಗುಪ್ಪ ಪಟ್ಟಣದ ಜ್ಞಾನಗಂಗಾ ಪ್ರೌಢಶಾಲೆ, ಪಿಯುಸಿ ಕಾಲೇಜು ಆಶ್ರಯದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು   

ಚಿಟಗುಪ್ಪ: ‘ವಿವೇಕಾನಂದರ ವೀರವಾಣಿಯಿಂದ ಯುವಕರಲ್ಲಿ ಜೀವನೋತ್ಸಾಹ ಹೆಚ್ಚುತ್ತದೆ. ಹಿರಿಯರಲ್ಲಿ ಅಧ್ಯಾತ್ಮಿಕ ಚಿಂತನ ಶಕ್ತಿ ಜಾಗೃತಗೊಳ್ಳುತ್ತದೆ’ ಎಂದು ವಿವೇಕಾನಂದ ಶಿಕ್ಷಣ ಮತ್ತು ಅಭಿವೃದ್ಧಿ ದತ್ತಿ ನ್ಯಾಸದ ಮುಖ್ಯಸ್ಥ ಸುರೇಶ್‌ ಚೌದ್ರಿ ಹೇಳಿದರು.

ಇಲ್ಲಿಯ ಜ್ಞಾನಗಂಗಾ ಪ್ರೌಢಶಾಲೆ ಹಾಗೂ ಪಿಯುಸಿ ಕಾಲೇಜಿನ ಆಶ್ರಯದಲ್ಲಿ ನಡೆದ ವಿವೇಕಾನಂದರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ವಿವೇಕಾನಂದರ ಜೀವನ ಮೌಲ್ಯಗಳು ಎಲ್ಲರ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಬದುಕು ಸಾರ್ಥಕವಾಗುತ್ತದೆ’ ಎಂದರು.

ಆರಂಭದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ಪದಾಧಿಕಾರಿಗಳಾದ ಮಹಾದೇವ ಹಿರಾಸ್ಕರ್‌, ಕಲ್ಪನಾ ಲಕ್ಷ್ಮಣ, ಶಾರದಾ ಸುರೇಶ್‌, ಪ್ರಾಚಾರ್ಯ ಕುಪೇಂದ್ರ ಪಾಟೀಲ್‌, ಸುಷ್ಮಾ ಜಟ್ಲಾ, ರೂತ್‌ ರಮೇಶ್‌, ಭಾವಿಕಾ, ಸೃಷ್ಟಿ ಇತರರು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.