ADVERTISEMENT

ವಕ್ಫ್‌ ವಿವಾದ: ಚಟನಳ್ಳಿ ಗ್ರಾಮಕ್ಕೆ ಭೇಟಿ ನೀಡಲಿರುವ ಯತ್ನಾಳ, ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 15:49 IST
Last Updated 24 ನವೆಂಬರ್ 2024, 15:49 IST
   

ಬೀದರ್‌: ರೈತರ ಪಹಣಿಯಲ್ಲಿ ವಕ್ಫ್‌ ಆಸ್ತಿಯೆಂದು ನಮೂದಾಗಿರುವ ತಾಲ್ಲೂಕಿನ ಧರ್ಮಾಪೂರ ಹಾಗೂ ಚಟನಳ್ಳಿ ಗ್ರಾಮಕ್ಕೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ನೇತೃತ್ವದ ತಂಡ ಸೋಮವಾರ (ನ.25) ಭೇಟಿ ನೀಡಲಿದೆ.

ಗ್ರಾಮಸ್ಥರನ್ನು ಭೇಟಿ ಮಾಡಿ, ವಕ್ಫ್‌ ವಿವಾದದ ಕುರಿತು ಶಾಸಕರು ಚರ್ಚಿಸುವರು. ಬೆಳಿಗ್ಗೆ 9.30ಕ್ಕೆ ಧರ್ಮಾಪೂರಕ್ಕೆ ಭೇಟಿ ನೀಡುವರು. ಬಳಿಕ ಗಣೇಶ ಮೈದಾನದಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುವರು. ನಂತರ ರ್‍ಯಾಲಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸುವರು.

ಸಂಜೆ 4ಕ್ಕೆ ಚಟನಳ್ಳಿಗೆ ಭೇಟಿ ಕೊಡುವರು ಎಂದು ‘ವಕ್ಫ್‌ ಹಟಾವೋ ದೇಶ್‌ ಬಚಾವೋ’ ಸಮಿತಿ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.