ADVERTISEMENT

ಬೀದರ್‌ನಿಂದ ವಕ್ಫ್‌ ಅದಾಲತ್‌ ಆರಂಭ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 12:36 IST
Last Updated 24 ಜೂನ್ 2024, 12:36 IST
   

ಬೀದರ್‌: ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್‌. ಜಮೀರ್‌ ಅಹಮ್ಮದ್‌ ಖಾನ್‌ ಅವರು ಬೀದರ್‌ ಜಿಲ್ಲೆಯಿಂದ ಸೋಮವಾರ ವಕ್ಫ್‌ ಅದಾಲತ್‌ ಕುಂದು ಕೊರತೆಗಳ ಸಭೆ ಆರಂಭಿಸಿದರು.

ವಕ್ಫ್‌ ಆಸ್ತಿ ಕಬಳಿಕೆ, ಸರ್ವೇ, ಖಬರಸ್ತಾನಗಳ ಸಂರಕ್ಷಣೆಗೆ ಸಂಬಂಧಿಸಿದಂತೆ 178 ಜನರಿಂದ ಅಹವಾಲು ಸ್ವೀಕರಿಸಿದರು. ಆನಂತರ ಮಾತನಾಡಿದ ಅವರು, ಬೀದರ್‌ ಜಿಲ್ಲೆ ಮೂಲಕ ಮೊದಲ ವಕ್ಫ್‌ ಅದಾಲತ್‌ ಆರಂಭಿಸಿದ್ದೇನೆ. ತಿಂಗಳಲ್ಲಿ ಮೂರು ಜಿಲ್ಲೆಗಳಲ್ಲಿ ವಕ್ಫ್‌ ಅದಾಲತ್‌ ನಡೆಸಲು ತೀರ್ಮಾನಿಸಿದ್ದೇನೆ. ಆಯಾ ಜಿಲ್ಲೆಗಳಿಗೆ ತೆರಳಿ, ಜನರಿಂದ ನೇರವಾಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವುದು ಇದರ ಮುಖ್ಯ ಉದ್ದೇಶ. ನಮ್ಮ ಸರ್ಕಾರದಲ್ಲಿ ಐದು ವರ್ಷ ಈ ಇಲಾಖೆಯ ಸಚಿವನಾಗಿದ್ದರೆ ಉತ್ತಮ ಕೆಲಸ ಮಾಡಿ ಹೊಸ ಇತಿಹಾಸ ನಿರ್ಮಿಸುವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT