ADVERTISEMENT

ಬಸ್‌ ಚಾಲಕರಾಗಿ 38 ವರ್ಷ ಸೇವೆ: ಮೆರವಣಿಗೆ ಮೂಲಕ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 12:10 IST
Last Updated 1 ಫೆಬ್ರುವರಿ 2022, 12:10 IST
ಸೇವಾ ನಿವೃತ್ತಿ ಹೊಂದಿದ ಔರಾದ್ ಘಟಕದ ಬಸ್ ಚಾಲಕ ಎಂ.ಡಿ. ಇಕ್ಬಾಲ್ ಅವರನ್ನು ಬೀಳ್ಕೊಡಲಾಯಿತು
ಸೇವಾ ನಿವೃತ್ತಿ ಹೊಂದಿದ ಔರಾದ್ ಘಟಕದ ಬಸ್ ಚಾಲಕ ಎಂ.ಡಿ. ಇಕ್ಬಾಲ್ ಅವರನ್ನು ಬೀಳ್ಕೊಡಲಾಯಿತು   

ಔರಾದ್: ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ 38 ವರ್ಷಗಳ ಕಾಲ ಚಾಲಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಎಂ.ಡಿ. ಇಕ್ಬಾಲ್ ಅವರನ್ನು ಸೋಮವಾರ ಇಲ್ಲಿ ಬೀಳ್ಕೊಡಲಾಯಿತು.

ಸಾರಿಗೆ ಸಂಸ್ಥೆ ಸಿಬ್ಬಂದಿ ಬಸ್‍ನಲ್ಲಿ ಮೆರವಣಿಗೆ ಮಾಡುವ ಮೂಲಕ ಅವರನ್ನು ಮನೆ ತನಕ ಕಳುಹಿಸಿದರು.

ಘಟಕ ವ್ಯವಸ್ಥಾಪಕ ಎಂ.ಡಿ. ನಯೀಮ್ ಅವರು ಚಾಲಕ ಎಂ.ಡಿ. ಇಕ್ಬಾಲ್ ಅವರ ಸೇವೆ ನೆನಪಿಸಿದಾಗ ಕೆಲ ಹೊತ್ತು ಅವರು ಗದ್ಗದಿತರಾದರು. ಎಂ.ಡಿ ಇಕ್ಬಾಲ್ ಕೇವಲ ಚಾಲಕರಾಗಿರಲಿಲ್ಲ. ಅವರು ನಮ್ಮೆಲ್ಲರ ಮಾರ್ಗದರ್ಶಕರು ಎಂದು ಹೇಳಿದರು.

ADVERTISEMENT

‘ರಾಜ್ಯದ ಬೇರೆ ಬೇರೆ ಕಡೆ ಸೇವೆ ಸಲ್ಲಿಸಿ ಬಂದ ಇವರು ಕಳೆದ 18 ವರ್ಷಗಳಿಂದ ನಮ್ಮ ಡಿಪೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಪಘಾತ ರಹಿತ ಸೇವೆ ಸಲ್ಲಿಸಿದ್ದಕ್ಕಾಗಿ ಅವರು 2020ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ನಿಜವಾಗಲೂ ಅವರ ಸೇವೆ ಇಡೀ ರಾಜ್ಯದ ಚಾಲಕ–ನಿರ್ವಾಹಕರಿಗೆ ಮಾದರಿಯಾಗಿದೆ’ ಎಂದರು.

ಗಣ್ಯರಾದ ರಹೀಂಸಾಬ್, ಡಾ.ಫಯಾಜ್‍ಅಲಿ, ಸಾರಿಗೆ ಸಂಸ್ಥೆ ಎಸ್‌.ಸಿ, ಎಸ್‌.ಟಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ ಗಾಯಕವಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಟೈಗರ್, ಸಂಚಾಲಕ ಪರಮೇಶ್ವರ ವಾಘಮಾರೆ, ಸಿಬ್ಬಂದಿ ಮೇಲ್ವಿಚಾರಕ ಧನರಾಜ, ರಾಹುಲ್, ಉಮಾಕಾಂತ, ಕಿರಿಯ ಸಹಾಯಕ ಸಂಗಪ್ಪ ಹಾಗೂ ಸಂಸ್ಥೆಯ ಇತರೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.