ADVERTISEMENT

ಯೋಗದಿಂದ ರೋಗಮುಕ್ತ ಸಮಾಜ: ಯೋಗೆಂದ್ರ ಯದಲಾಪೂರೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 16:07 IST
Last Updated 24 ಜೂನ್ 2024, 16:07 IST
ಬೀದರ್‌ನ ಸಿದ್ದಾರ್ಥ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಯೋಗೆಂದ್ರ ಯದಲಾಪೂರೆ ಮಾತನಾಡಿದರು
ಬೀದರ್‌ನ ಸಿದ್ದಾರ್ಥ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಯೋಗೆಂದ್ರ ಯದಲಾಪೂರೆ ಮಾತನಾಡಿದರು   

ಬೀದರ್‌: ‘ನಿತ್ಯ ಎಲ್ಲರೂ ಯೋಗ ಮಾಡಿದರೆ ರೋಗಮುಕ್ತ ಸಮಾಜ ನಿರ್ಮಾಣವಾಗುತ್ತದೆ’ ಎಂದು ಬೀದರ್‌ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಯೋಗೆಂದ್ರ ಯದಲಾಪೂರೆ ಹೇಳಿದರು.

ಹತ್ತನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಸಿದ್ದಾರ್ಥ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಒಂದು ದಿನದ ಯೋಗ ಕಾರ್ಯಾಗಾರ ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಭಾರತ ವಿಶ್ವಕ್ಕೆ ಯೋಗ ಕೊಟ್ಟಿದೆ. ನಮ್ಮ ಋಷಿ, ಮುನಿಗಳು ಹಾಕಿಕೊಟ್ಟ ಸಂಸ್ಕೃತಿ, ಪರಂಪರೆಯ ಭಾಗ ಯೋಗ. ಅದನ್ನು ಎಲ್ಲರೂ ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.

ADVERTISEMENT

ಔರಾದ್‌ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಊರ್ವಶಿ ಕೊಡಲಿ ಮಾತನಾಡಿ, ಯೋಗದಿಂದ ದೈನಂದಿನ ಜಂಜಾಟಗಳು, ಒತ್ತಡದಿಂದ ಹೊರಬರಬಹುದು ಎಂದು ಹೇಳಿದರು.

ಬೀದರ್‌ ಸರ್ಕಾರಿ ಪದವಿ ಮಹಿಳಾ ಕಾಲೇಜಿನ ಸಂಜುಕುಮಾರ ಅಪ್ಪೆ, ಪ್ರಾಂಶುಪಾಲ ಗೋಪಾಲ ಬಡಿಗೇರ್, ‌‌ ಉಪಪ್ರಾಂಶುಪಾಲ ಜಗದೇವಪ್ಪಾ ಚಕ್ಕಿ, ಕಾರ್ಯಾಗಾರದ ಸಂಯೋಜಕ ರವೀಂದ್ರ ಖೂಬಾ ಹಾಜರಿದ್ದರು. ಬೀದರ್‌, ಬಸವಕಲ್ಯಾಣ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.