ADVERTISEMENT

ಸ್ವಾಗತ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ, ಪ್ರಧಾನ ಕಾರ್ಯದರ್ಶಿ ಗುರುರಾಜ ಸ್ವಾಮಿ

ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 8:11 IST
Last Updated 12 ಏಪ್ರಿಲ್ 2022, 8:11 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏಪ್ರಿಲ್ 23 ರಂದು ನಡೆಯಲಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯೂ ಆದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗುರುರಾಜ ಸ್ವಾಮಿ ಮೋಳಕೇರಿ ಅವರನ್ನು ಆಯ್ಕೆ ಮಾಡಲಾಗಿದೆ.

ನಗರದ ಲಾಡಗೇರಿಯ ಹಿರೇಮಠ ಸಂಸ್ಥಾನದಲ್ಲಿ ಹಲಬರ್ಗಾ, ಶಿವಣಿ, ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ಹಾಗೂ ಗಂಗಾಧರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಜಯಂತಿ ಯುಗಮಾನೋತ್ಸವ ಯಶಸ್ವಿಗೆ ಸ್ವಾಗತ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿಯ ಸಿದ್ರಾಮಯ್ಯ ಸ್ವಾಮಿ ಹಾಗೂ ಶಿವಯ್ಯ ಸ್ವಾಮಿ ತಿಳಿಸಿದ್ದಾರೆ. ವಿವಿಧ ಸಮಿತಿಗಳ ಪದಾಧಿಕಾರಿಗಳ ವಿವರ ಹೀಗಿದೆ.

ಸ್ವಾಗತ ಸಮಿತಿ: ವೈಜಿನಾಥ ಕಮಠಾಣೆ, ರಾಮಕೃಷ್ಣ ಸಾಳೆ, ರೇವಣಸಿದ್ದಪ್ಪ ಜಲಾದೆ, ಕುಶಾಲರಾವ್ ಯಾಬಾ, ರಮೇಶ ಪಾಟೀಲ ಸೋಲಪೂರ, ಶಿವರಾಜ ನರಶೆಟ್ಟಿ, ಧನರಾಜ ತಾಳಂಪಳ್ಳಿ, ಮಲ್ಲಿಕಾರ್ಜುನ ಪಾಟೀಲ ಚಿಟಗುಪ್ಪ, ಮಲ್ಲಿಕಾರ್ಜುನ ಸ್ವಾಮಿ ಗೋರಚಿಂಚೋಳಿ, ಬಾಬುರಾವ್ ತುಂಬಾ, ಜಗದೀಶ್ ಖೂಬಾ (ಉಪಾಧ್ಯಕ್ಷರು), ಡಾ. ರಜನೀಶ್ ವಾಲಿ (ಖಜಾಂಚಿ).
ಗೌರವ ಸಲಹಾ ಸಮಿತಿ: ಡಾ. ಚನ್ನಬಸಪ್ಪ ಹಾಲಹಳ್ಳಿ, ಬಸವರಾಜ ಜಾಬಶೆಟ್ಟಿ, ಬಿ.ಜಿ. ಶೆಟಕಾರ್, ಮಲ್ಲಿಕಾರ್ಜುನ ಮಾಶೆಟ್ಟಿ, ಬಸವರಾಜ ದೇಶಮುಖ, ಮಲ್ಲಿಕಾರ್ಜುನ ಗಚ್ಚಿನಮಠ, ರಾಜಕುಮಾರ ಖಂಡ್ರೆ, ಡಾ. ವೀರೇಂದ್ರ ಶಾಸ್ತ್ರಿ, ಶಿವರಾಜ ಅಲ್ಮಾಜೆ, ಶಿವಕುಮಾರ ಸ್ವಾಮಿ ಗುಳೇದಮಠ, ಸಿದ್ರಾಮಪ್ಪ ಆಣದೂರೆ, ಸಂಜು ಮಠಪತಿ, ಪ್ರೊ. ಕುಮಾರ ಸ್ವಾಮಿ, ಸತೀಶ್ ನೌಬಾದೆ (ಸದಸ್ಯರು).

ADVERTISEMENT

ಪ್ರಚಾರ ಸಮಿತಿ: ರವಿ ಸ್ವಾಮಿ (ಅಧ್ಯಕ್ಷ), ದಯಾನಂದ ಸ್ವಾಮಿ, ಆಕಾಶ ಪಾಟೀಲ ಅಯಾಸಪೂರ, ಆರ್.ಜಿ. ಮಠಪತಿ, ಬಸವರಾಜ ಸ್ವಾಮಿ ಹೆಡಗಾಪೂರ (ಉಪಾಧ್ಯಕ್ಷರು), ಮಹಾರುದ್ರ ಡಾಕುಳಗಿ (ಪ್ರಧಾನ ಕಾರ್ಯದರ್ಶಿ), ಸಚಿನ್ ಪಾಟೀಲ (ಕಾರ್ಯದರ್ಶಿ), ವಿನಯ್ ಜಿ.ಎಂ. ಸ್ವಾಮಿ (ಸಹ ಕಾರ್ಯದರ್ಶಿ).

ಪ್ರಸಾದ ಸಮಿತಿ: ಸಿದ್ರಾಮಯ್ಯ ಸ್ವಾಮಿ (ಅಧ್ಯಕ್ಷ), ಮಂಜುನಾಥ ಬಿರಾದಾರ, ಸಂಜೀವಕುಮಾರ ಸ್ವಾಮಿ, ಮಹಾಲಿಂಗ ಸ್ವಾಮಿ (ಉಪಾಧ್ಯಕ್ಷರು), ಓಂಪ್ರಕಾಶ ರೊಟ್ಟೆ (ಪ್ರಧಾನ ಕಾರ್ಯದರ್ಶಿ), ಸಚಿನಕುಮಾರ ಸ್ವಾಮಿ, ಚಂದ್ರಶೇಖರ ವಂಕೆ, ವಿಶ್ವರಾಧ್ಯ ಕಾಶಿ (ಕಾರ್ಯದರ್ಶಿ).

ಮೆರವಣಿಗೆ ಸಮಿತಿ: ಡಾ. ರಾಜಕುಮಾರ ಹೆಬ್ಬಾಳೆ (ಅಧ್ಯಕ್ಷ), ವೀರಶೆಟ್ಟಿ ಖ್ಯಾಮಾ, ಅರುಣಕುಮಾರ ಹೋತಪೇಟ, ಕಾಶೀನಾಥ ಜಕ್ಕಾ, ಸಂಗಮೇಶ ಮೂಲಗೆ, ಮಹೇಶ್ವರ ಸ್ವಾಮಿ, ಶ್ರೀಕಾಂತ ಸ್ವಾಮಿ, ಸಂಗಮೇಶ ಬಿರಾದಾರ (ಉಪಾಧ್ಯಕ್ಷರು), ವರದಯ್ಯ ಸ್ವಾಮಿ (ಪ್ರಧಾನ ಕಾರ್ಯದರ್ಶಿ), ಸೋಮನಾಥ ಮುಧೋಳ, ಅಂಬರೀಷ್ ಬಟನಾಪುರೆ, ಗಿರೀಶ್ ಬಿರಾದಾರ, ಸತೀಶ್ ತೆಳಮನಿ, ಸುನೀಲ್ ಪತ್ರಿ (ಕಾರ್ಯದರ್ಶಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.