ADVERTISEMENT

‘ಕುಟುಂಬದ ಚರ್ಚೆಗೆ ಸರ್ಕಾರಿ ವೇದಿಕೆ ಏಕೆ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:06 IST
Last Updated 3 ಜುಲೈ 2024, 16:06 IST
ಬಸವರಾಜ ಆರ್ಯ ಬಿಜೆಪಿ ಮುಖಂಡ ಹುಮನಾಬಾದ್.
ಬಸವರಾಜ ಆರ್ಯ ಬಿಜೆಪಿ ಮುಖಂಡ ಹುಮನಾಬಾದ್.   

ಹುಮನಾಬಾದ್: ಶಾಸಕರ ವೈಯಕ್ತಿಕ ವಿಚಾರ ಇಟ್ಟುಕೊಂಡು ಅವರ ಪಕ್ಕದಲ್ಲಿ ಚೇರ್ ಹಾಕಬೇಡಿ ಎಂದು ಪರಿಷತ್ ಸದಸ್ಯ ಹೇಳಿರುವುದು ಖಂಡನೀಯವಾಗಿದೆ ಎಂದು ಬಿಜೆಪಿ ಮುಖಂಡ ಬಸವರಾಜ ಆರ್ಯ ತಿಳಿಸಿದ್ದಾರೆ. ಪಟ್ಟಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರು ಶಾಸಕರ ಬಗ್ಗೆ ಅಸಂವಿಧಾನಿಕ ಪದ ಬಳಿಸಿ ಅವಮಾನಿಸಿದ್ದಾರೆ. ಮೂವರು ಒಂದೇ ಕುಟುಂಬದವರು. ನಿಮ್ಮ ವೈಯಕ್ತಿಕ ಟೀಕಾಪ್ರಹಾರ ಏನೇ ಇದ್ದರೂ ಸಭೆಯ ಹೊರಗಡೆ ಮಾಡಿಕೊಳ್ಳಿ. ಅದು ಬಿಟ್ಟು ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಮ್ಮ ತಮ್ಮ ಕುಟುಂಬದ ವೈಯಕ್ತಿಕ ವಿಚಾರಗಳು ಚರ್ಚೆ ಮಾಡಿ, ಸಭೆಯಲ್ಲಿ ಗದ್ದಲ ಮಾಡುತ್ತಿರುವುದು ಎಷ್ಟು ಸರಿ. ನಿಮ್ಮ ಕುಟುಂಬದ ಚರ್ಚೆಗೆ ಏಕೆ ? ಸರ್ಕಾರಿ ವೇದಿಕೆ ಬಳಿಸಿಕೊಳ್ಳುತ್ತಿರಿ. ನಮ್ಮ ಗಮನಕ್ಕೆ ತನ್ನಿ ನಾವು ಹುಮನಾಬಾದ್ ನಾಗರಿಕ ವತಿಯಿಂದ ಇಲ್ಲಿಯ ತೇರು ಮೈದಾನದಲ್ಲಿ ಒಂದು ವೇದಿಕೆ ಸಿದ್ಧಗೊಳಿಸುತ್ತೇವೆ. ಇಲ್ಲಿ ನಿಮ್ಮ ಕುಟುಂಬದ ಚರ್ಚೆ ಮಾಡಿಕೊಳ್ಳಿ ಎಂದರು. ಪದೇ ಪದೇ ಶಾಸಕ ಮತ್ತು ಪರಿಷತ್ ಸದಸ್ಯರು ಬಹಿರಂಗವಾಗಿ ಜಗಳವಾಡುತ್ತಿದರೆ. ಹೇಗೆ. ಇಡೀ ಕ್ಷೇತ್ರದ ಜನರು ನಿಮ್ಮನ್ನು ಗಮನಿಸುತ್ತಿದ್ದಾರೆ ಎಂಬುವುದು ಮುರಿಯಬೇಡಿ ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಪ್ರಭಾಕರ್ ನಾಗರಹಳೆ, ಗಿರೀಶ್ ತುಂಬಾ, ಅನೀಲ ಪಸರ್ಗಿ ಸೇರಿದಂತೆ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.