ADVERTISEMENT

ಕಾಡುಹಂದಿಗಳ ದಾಳಿಗೆ ಬೀದರ್‌ನ ಕೆಲ ಹಳ್ಳಿಗಳಲ್ಲಿ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 10:47 IST
Last Updated 5 ಜುಲೈ 2020, 10:47 IST
ಕಮಲನಗರ ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದ ರೈತ ಶಿವಕುಮಾರ ಧಬಾಲೆ ಅವರ ಹೊಲದಲ್ಲಿ ಕಾಡುಹಂದಿ ದಾಳಿಯಿಂದ ಕಬ್ಬು ಬೆಳೆ ಹಾಳಾಗಿದೆ
ಕಮಲನಗರ ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದ ರೈತ ಶಿವಕುಮಾರ ಧಬಾಲೆ ಅವರ ಹೊಲದಲ್ಲಿ ಕಾಡುಹಂದಿ ದಾಳಿಯಿಂದ ಕಬ್ಬು ಬೆಳೆ ಹಾಳಾಗಿದೆ   

ಕಮಲನಗರ: ತಾಲ್ಲೂಕಿನ ಚ್ಯಾಂಡೇಶ್ವರ, ಸೋನಾಳ, ಹೊರಂಡಿ ಹಾಗೂ ಡಿಗ್ಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡುಹಂದಿ ಹಾವಳಿ ಹೆಚ್ಚಾಗಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ.

‘ಕೃಷಿ ವೆಚ್ಚ ಹೆಚ್ಚುತ್ತಿದೆ. ಬೆಳೆಗಾರರು ತೊಂದರೆಯಲ್ಲಿದ್ದಾರೆ. ಇದರ ಜತೆಗೆ ಹಂದಿ ಕಾಟ ಹೆಚ್ಚಾಗಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ’ ಎಂದು ರೈತ ಪ್ರವೀಣ ಧಬಾಲೆ ತಿಳಿಸಿದರು.

ಸಾಲ ಮಾಡಿ ಬೆಳೆದ ಬೆಳೆ ಹಂದಿ ಪಾಲಾಗುತ್ತಿದೆ. 7 ಖಂಡಕಿ ಉದ್ದ ಬೆಳೆದ ಕಬ್ಬಿಗೆ ಹಾನಿಯಾಗುತ್ತಿದೆ. ಹಂದಿಗಳಿಂದಾಗಿ ಎಲೆಗಳು ರಾಶಿ ರಾಶಿ ಬಿದ್ದು ಮಣ್ಣು ಪಾಲಾಗುತ್ತಿವೆ ಎಂದು ಹೇಳಿದರು.

ADVERTISEMENT

ರೈತರು ಬೆಳೆ ಕಳೆದುಕೊಂಡು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ.

ಜಿಂಕೆ ಕಾಟ ಮತ್ತು ಹಂದಿ ಕಾಟ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಶಿವಕುಮಾರ ಧಬಾಲೆ, ವಿಷ್ಣುಕಾಂತ ರಾಂಪೂರೆ ಹಾಗೂ ಉಮಾಕಾಂತ ಮುರ್ಕೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.