ADVERTISEMENT

ಔರಾದ್: ಸೋಯಾ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ನಾಗರಾಜ್ ಬಿ.
Published 29 ಸೆಪ್ಟೆಂಬರ್ 2024, 12:17 IST
Last Updated 29 ಸೆಪ್ಟೆಂಬರ್ 2024, 12:17 IST
<div class="paragraphs"><p>ಅರುಣಾಬಾಯಿ ಬಸಪ್ಪ ರೂಪಾ</p></div>

ಅರುಣಾಬಾಯಿ ಬಸಪ್ಪ ರೂಪಾ

   

ಔರಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ಮಮದಾಪುರ ಗ್ರಾಮದಲ್ಲಿ ಸೋಯಾ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ.

ಅರುಣಾಬಾಯಿ ಬಸಪ್ಪ ರೂಪಾ (50) ಮೃತರು. ಅವರಿಗೆ ಪತಿ, ಇಬ್ಬರು ಪುತ್ರರು, ಪುತ್ರಿಯರು ಇದ್ದಾರೆ.

ADVERTISEMENT

ತಮ್ಮ ಹೊಲದಲ್ಲಿ ಸೋಯಾ ರಾಶಿ ಮಾಡುವಾಗ ಯಂತ್ರದಲ್ಲಿ ಸೀರೆ ಜತೆ ಮಹಿಳೆ ಸಿಲುಕಿ ಒದ್ದಾಡಿದ್ದಾರೆ. ಸ್ಥಳದಲ್ಲಿದ್ದವರು ತಕ್ಷಣ ಯಂತ್ರ ಬಂದ ಮಾಡಿ ಮಹಿಳೆಯನ್ನು ಹೊರತೆಗೆಯುಷ್ಟರಲ್ಲಿ ಅವರು ಸಾವನ್ನಪ್ಪಿದು. ಯಂತ್ರದ ಪಟ್ಟಿ ಕೊರಳಿಗೆ ಸಿಲುಕಿ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.