ADVERTISEMENT

ರೋಟರಿ ಕ್ಲಬ್‌ನಿಂದ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 5:44 IST
Last Updated 31 ಮಾರ್ಚ್ 2024, 5:44 IST
ರೋಟರಿ ಕ್ಲಬ್‌ನಿಂದ ಬೀದರ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು
ರೋಟರಿ ಕ್ಲಬ್‌ನಿಂದ ಬೀದರ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು   

ಬೀದರ್: ರೋಟರಿ ಕ್ಲಬ್‌ನಿಂದ ನಗರದ ಐಎಂಎ ಸಭಾಂಗಣದಲ್ಲಿ ಶನಿವಾರ ಮಹಿಳಾ ದಿನ ಆಚರಿಸಲಾಯಿತು.

ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ. ಜಿ. ಉದ್ಘಾಟಿಸಿ, 'ಮಹಿಳೆಯರಲ್ಲಿ ಹೂಡಿಕೆ ಮಾಡುವ ಮೂಲಕ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ನಾಯಕತ್ವ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಲಿಂಗ ಸಮಾನತೆ ತರಬೇಕು' ಎಂದು ಅಭಿಪ್ರಾಯಪಟ್ಟರು.

'ಹಿಂದಿನ ಕಾಲದಲ್ಲಿ ಹೆಣ್ಣು, ಹೊನ್ನು,ಮಣ್ಣು ಮಾಯೆಯೆಂದು ಪರಿಗಣಿಸಿ ಅವಳನ್ನು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಿದರು. ಆದರೆ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ನಾಲ್ಕು ಗೋಡೆಗಳನ್ನು ದಾಟಿ ಹೊರಬಂದಿದ್ದಾಳೆ. ಮೊದಲಿನ ಹಾಗೆ ತನ್ನಲ್ಲಿರುವ ಸಾಮರ್ಥ್ಯವನ್ನು ಪ್ರದರ್ಶಿಸಲು ಹಿಂಜರಿಯುತಿಲ್ಲ. ಹೀಗೆ ಗಂಡಿಗೆ ಸಮನಾಗಿ ಹೆಗಲಿಗೆ -ಹೆಗಲು ಕೊಟ್ಟು ದುಡಿದು ತನ್ನ ಅಸ್ಥಿತ್ವವನ್ನು ತೋರಿಸಿಕೊಂಡಿದಾಳೆ' ಎಂದು ಹೇಳಿದರು.

ADVERTISEMENT

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಶಾರದಾ ಮಾಳಗೆ, ಸಬ್‌ ಇನ್‌ಸ್ಪೆಕ್ಟರ್‌ ಶೀಲಾದೇವಿ ಎಸ್. ಎನ್., ಸಮಾಜ ಸೇವಕಿ ಕವಿತಾ ಹುಷಾರೆ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕಿ ಉಮಾದೇವಿ ಚಿಲ್ಲರ್ಗಿ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಯಿಪ್ರಿಯಾ ಚಿದ್ರಿ , ನಾಗವೇಣಿ ಕೊಳಾರ, ಭಾನುಪ್ರಿಯ ಅರಳಿ, ಉಷಾ ಪ್ರಭಾಕರ, ಆಶಾರಾಣಿ ಸಾಗರ, ಶ್ವೇತಾ ಗೌಡ , ಕೆಕೆಆರ್ ಟಿಸಿಯ ನಿರ್ವಾಹಕಿ ವಿಮಲಾ ದುರ್ಗೆ, ಶುಶ್ರೂಷಕಿ ಕಪಿಲಾ ಮಡಿವಾಳ, ವಿಜಯಲಕ್ಷ್ಮಿ ಚೊಂಡೆ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಾಂತ ಕಾಡಾದಿ ಅಧ್ಯಕ್ಷತೆ, ನಿಕಟಪೂರ್ವ ಅಧ್ಯಕ್ಷ ರವಿ ಮೂಲಗೆ, ಕಾರ್ಯದರ್ಶಿ ಸೋಮಶೇಖರ ಪಾಟೀಲ, ಸುರೇಶ ಚನಶೆಟ್ಟಿ, ಅನಿಲ ಮಸೂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.