ADVERTISEMENT

ವಿಶ್ವ ಅಮ್ಮಂದಿರ ದಿನ: ತಾಯಂದಿರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 12 ಮೇ 2024, 15:35 IST
Last Updated 12 ಮೇ 2024, 15:35 IST
ಔರಾದ್ ತಾಲ್ಲೂಕಿನ ವಡಗಾಂವ್‌ನಲ್ಲಿ ನಡೆದ ವಿಶ್ವ ಅಮ್ಮಂದಿರ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಜ್ಯೋತಿ ಎಕ್ಕೆಳ್ಳೆ, ನಸೀಮಾ ಬೇಗಂ, ಡಾ.ಸಿದ್ದಾರೆಡ್ಡಿ, ರತಿಕಾಂತ ನೇಳಗೆ ಹಾಜರಿದ್ದರು
ಔರಾದ್ ತಾಲ್ಲೂಕಿನ ವಡಗಾಂವ್‌ನಲ್ಲಿ ನಡೆದ ವಿಶ್ವ ಅಮ್ಮಂದಿರ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಜ್ಯೋತಿ ಎಕ್ಕೆಳ್ಳೆ, ನಸೀಮಾ ಬೇಗಂ, ಡಾ.ಸಿದ್ದಾರೆಡ್ಡಿ, ರತಿಕಾಂತ ನೇಳಗೆ ಹಾಜರಿದ್ದರು   

ಔರಾದ್: ತಾಲ್ಲೂಕಿನ ವಡಗಾಂವ್‌ (ಡಿ)ದ ಗೆಳೆಯರ ಬಳಗದ ಆಶ್ರಯದಲ್ಲಿ ಭಾನುವಾರ ವಿಶ್ವ ಅಮ್ಮಂದಿರ ದಿನವನ್ನು ವಿನೂತನವಾಗಿ ಆಚರಿಸಲಾಯಿತು.

ವಡಗಾಂವ್ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ 100ಕ್ಕೂ ಹೆಚ್ಚು ಮಹಿಳೆಯರನ್ನು ಆಹ್ವಾನಿಸಿ ಅವರನ್ನು ಸಾಲಾಗಿ ಕೂಡಿಸಿ ಅವರ ಪಾದಗಳಿಗೆ ನಮಿಸಿ ಗೌರವಿಸುವ ಮೂಲಕ ವಿಶ್ವ ಅಮ್ಮಂದಿರ ದಿನ ಆಚರಿಸಲಾಯಿತು.

ವಡಗಾಂವ್ ಗ್ರಾಮದ ನಿವಾಸಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯೂ ಆದ ಖಾಜಾ ಖಲೀಲುಲ್ಲ ಮಾತನಾಡಿ,‘ನಮ್ಮ ಊರಲ್ಲಿ ಹಲವು ವರ್ಷಗಳಿಂದ ಈ ರೀತಿಯ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ. ಬಡ ಕುಟುಂಬದಲ್ಲಿ ಹುಟ್ಟಿದ ನಾನು ಕೆಎಎಸ್ ಅಧಿಕಾರಿಯಾಗಿದ್ದು ನನ್ನ ಗುರುಗಳಾದ ಲತಾ ದಂಡೆ ಅವರ ಪ್ರೇರಣೆ ಹಾಗೂ ಸಹಕಾರದಿಂದ. ಹೀಗಾಗಿ ಒಬ್ಬ ಪುರುಷನ ಏಳಿಗೆ ಹಿಂದೆ ಮಹಿಳೆಯ ಪ್ರೇರಣೆ ಇದ್ದೇ ಇರುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ’ ಎಂದು ಹೇಳಿದರು.

ADVERTISEMENT

ಉಪನ್ಯಾಸಕಿ ಜ್ಯೋತಿ ಎಕ್ಕೆಳ್ಳೆ ಕಾರ್ಯಕ್ರಮ ಉದ್ಘಾಟಿಸಿ,‘ಮಹಿಳೆಯರನ್ನು ಗೌರವಿಸುವ ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನಮಗೆ ತುಂಬಾ ಖುಷಿ ತಂದಿದೆ’ ಎಂದರು. ಅವ್ವ ಎಂಬುದು ತ್ಯಾಗದ ಪ್ರತಿರೂಪ. ಹೀಗಾಗಿ ನಮ್ಮ ಸುತ್ತಮುತ್ತ ಇರುವ ಮಹಿಳೆಯರನ್ನು ತಾಯಿ ಸ್ವರೂಪದಲ್ಲಿ ಗೌರವಿಸಬೇಕು’ ಎಂದರು.

ಸಂಪನ್ಮೂಲ ಶಿಕ್ಷಕ ಸಂತೋಷ ಮಹಾರಾಜವಾಡೆ, ತಾಯಿ ನಸೀಮಾಬೇಗಂ, ಶ್ರೀದೇವಿ ಗೌಡಾ, ಡಾ.ಸಿದ್ದಾರೆಡ್ಡಿ, ರತಿಕಾಂತ ನೇಳಗೆ, ಚಂದ್ರಕಾಂತ ಫುಲೆ, ಸಿದ್ದಪ್ಪ, ಹಾವಗಿರಾವ ನೇಳಗೆ, ಪ್ರಿಯಾಂಕಾ, ಅಂಬಿಕಾ, ರೇಣುಕಾ, ಸೋನಿ, ಪೂಜಾ ಹಾಗೂ ಆಕಾಶ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.